ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆಗೆ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರು ಬಂದಿದ್ದರು. ಆಗ ಅವರೊಂದು ಮಾತು ಹೇಳಿದ್ದರು. “ಮುಂದಿನ ದಿನಗಳಲ್ಲಿ ಎಲ್ಲಾ ಜಾಗತಿಕ ನಾಯಕರು ಮೊದಲು ಬೆಂಗಳೂರಿಗೆ ಭೇಟಿ ಕೊಟ್ಟು ಆನಂತರ ಬೇರೆ ಕಡೆ ಹೋಗುತ್ತಾರೆ” ಅವರ ಭವಿಷ್ಯ ನಿಜವಾಗಿದೆ ಎಂದು ಉಪ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಕರ್ನಾಟಕ ಮಾದರಿಯನ್ನು ಇಡೀ ದೇಶ ತಿರುಗಿ ನೋಡುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಆಸ್ತಿಯ ಮೌಲ್ಯ ಕೇವಲ 10 ಪಟ್ಟಲ್ಲ, ಸಾವಿರಾರು ಪಟ್ಟು ಹೆಚ್ಚಾಗಲಿದೆ ಎಂದು ಅಮೆರಿಕಾ ದೇಶದ ರಾಯಭಾರಿಯೊಬ್ಬರು ನನ್ನ ಬಳಿ ಹೇಳಿದ್ದರು. ಅವರ ಮಾತು ನಿಜವಾಗಿದೆ, ಏಕೆಂದರೆ ನಾನು ಸದಾಶಿವ ನಗರದಲ್ಲಿ ಚದರ ಅಡಿಗೆ 2 ಸಾವಿರ ಕೊಟ್ಟು ಮನೆ ತೆಗೆದುಕೊಂಡಿದ್ದೆ ಈಗ ಅದು 30 ಸಾವಿರವಾಗಿ ಬೆಳೆದಿದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.