Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ವಾಣಿಜ್ಯ ಸಂಸ್ಥೆಗಳ ಹಾಗೂ ಅಂಗಡಿಗಳ ಆನ್‌ಲೈನ್ ನೋಂದಣಿ ಕಡ್ಡಾಯ.!

0

 

ಹೊಸಪೇಟೆ : ನಗರದ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲದೇ, ಹೋಟೆಲ್, ರೆಸ್ಟೋರೆಂಟ್ಸ್, ಬೇಕರಿ, ಕೆಫೆ, ಆಡಳಿತ ಕಚೇರಿ ಹಾಗೂ ದಿನಸಿ ಅಂಗಡಿ ಸೇರಿದಂತೆ ಯಾವುದೇ ಕಾರ್ಮಿಕರನ್ನು ಹೊಂದಿಲ್ಲದಿದ್ದರೂ, ಎಲ್ಲಾ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಪ್ರಾರಂಭವಾದ ದಿನಾಂಕದಿAದ 30 ದಿನಗಳೊಳಗೆ ಸಂಬAಧಿತ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ನೋಂದಣಿಯಾಗದಿರುವ ಸಂಸ್ಥೆಗಳ ಮಾಲೀಕರು ನೊಂದಾಣಿಸಬೇಕು ಎಂದು ಉಪವಿಭಾಗದ ಕಾರ್ಮಿಕ ಅಧಿಕಾರಿ ಸೂರಪ್ಪ ಐ. ದೊಂಬರಮಟ್ಟೂರು ಅವರು ತಿಳಿಸಿದ್ದಾರೆ.

ಕಾಯ್ದೆ 1961 ಹಾಗೂ ನಿಯಮಾವಳಿ 1963ರ ಕಲಂ 4(1) ಮತ್ತು (3) ಹಾಗೂ ನಿಯಮ 3ರ ಮೇರೆಗೆ ಎಲ್ಲ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿ ಮಾಡುವುದು ಕಡ್ಡಾಯವಾಗಿರುತ್ತದೆ. ಕಾರ್ಮಿಕ ಇಲಾಖೆಯ ಅಭಿವೃದ್ದಿಪಡಿಸಿರುವ  www.ekarmika.karnataka.gov.in/ekarmika/static/home.aspx   ವೆಬ್‌ಸೈಟ್‌ನಲ್ಲಿ ಆಗಿನ್ ಆಗಿ ತಮ್ಮ ಸಂಸ್ಥೆಯ ವಿಳಾಸ, ಮಾಲೀಕರ ಹೆಸರು, ವ್ಯಾಪಾರದ ಸ್ವರೂಪ ಮಾಹಿತಿಗಳನ್ನು ನಮೂದಿಸಿ ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ಆನ್‌ಲೈನ್ ಶುಲ್ಕವನ್ನು ಪಾವತಿಸಬಹುದಾಗಿದೆ ಮತ್ತು ನೋಂದಣಿಗೆ ಅಂಗಡಿ ಮತ್ತು ಸಂಸ್ಥೆಯ ವಿಳಾಸ ಹಾಗೂ ಮಾಲೀಕರ ಗುರುತಿನ ಚೀಟಿ ದಾಖಲಾತಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಿ ನೋಂದಾಣಿ ಪತ್ರವನ್ನು ಸಹ ಆನ್‌ಲೈನ್ ಮೂಲಕ ಪಡೆದುಕೊಳ್ಳಬಹುದಾಗಿರುತ್ತದೆ. ನೋಂದಣಿಯು 5 ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ.

ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿ ಕಾನೂನು ಪ್ರಕಾರ ಕಡ್ಡಾಯವಾಗಿದ್ದು, ನೋಂದಣಿಯಾಗದೇ ಇದ್ದಲ್ಲಿ ನಿಯಮಾನುಸಾರ ಕಾನೂನು ಕ್ರಮ ಕೈಗೊಂಡು ಸಕ್ರಮ ಪ್ರಾಧಿಕಾರದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ನೋಂದಣಿ ಶುಲ್ಕವನ್ನು ಪಾವತಿಸಬೇಕು. ಶುಲ್ಕದ ವಿವರಗಳಿಗೆ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.

ನೋAದಣಿ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ವ್ಯತ್ಯಾಸ ಮತ್ತು ಸಮಸ್ಯೆಗಳು ಕಂಡುಬAದಲ್ಲಿ ಇಲಾಖೆಯ ಸಹಾಯವಾಣಿ 080-29753059 ಅಥವಾ 155214 ಹಾಗೂ ಇ-ಮೇಲ್ ವಿಳಾಸ ekarmikalabour@gmail.com   ಮತ್ತು ಕಾರ್ಮಿಕ ಇಲಾಖೆಯ ಅಧಿಕೃತ ಜಾಲತಾಣ karmikaspandana.karnataka.gov.in   ವೆಬ್‌ಸೈಟ್‌ನಲ್ಲಿ ಕ್ಷೇತ್ರವಾರು ಅಧಿಕಾರಿ/ಕಾರ್ಮಿಕ ನಿರೀಕ್ಷಕರ ಹಾಗೂ ದೂರವಾಣಿಯ ಮೂಲಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ವಯ ನೋಂದಣಿಯನ್ನು ಮಾಡಿಸಬಹುದಾಗಿದೆ.

Leave A Reply

Your email address will not be published.