Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ವಿಮಾನದಲ್ಲಿ ಪ್ರಯಾಣಿಕರ ಮುಂದೆ ಮಲ, ಮೂತ್ರ ವಿಸರ್ಜನೆ – ಓರ್ವ ಅರೆಸ್ಟ್

0

ನವದೆಹಲಿ: ಮುಂಬೈ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರಿದ್ದ ಸ್ಥಳದಲ್ಲೇ ಮಲ ಮತ್ತು ಮೂತ್ರ ವಿಸರ್ಜನೆ ಮಾಡಿ ದುರ್ವರ್ತನೆ ತೋರಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ರಾಮ್ ಸಿಂಗ್ ಎಂಬಾತ ವಿಮಾನದ 9 ನೇ ಸಾಲಿನಲ್ಲಿ ಮಲವಿಸರ್ಜನೆ, ಮೂತ್ರ ವಿಸರ್ಜನೆ ಮಾಡಿ ಮತ್ತು ಅಲ್ಲೇ ಉಗುಳಿದ್ದಾರೆ. ಮೊದಲಿಗೆ ಸಿಬ್ಬಂದಿ ವ್ಯಕ್ತಿಯ ವರ್ತನೆಗೆ ಮೌಖಿಕವಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಆ ಬಳಿಕ ಅವರನ್ನು ಇತರ ಪ್ರಯಾಣಿಕರಿಂದ ಪ್ರತ್ಯೇಕವಾಗಿ ಕೂರಿಸಿದ್ದಾರೆ.

ಇನ್ನು ಘಟನೆಯ ಬಗ್ಗೆ ಪೈಲಟ್-ಇನ್-ಕಮಾಂಡ್ ಅವರಿಗೆ ತಿಳಿಸಲಾಗಿದ್ದು, ಇತರ ಪ್ರಯಾಣಿಕರಿಗೆ ಈ ಘಟನೆ ಆಕ್ರೋಶಕ್ಕೆ ಕಾರಣವಾಗಿದೆ.

ವಿಮಾನ ಲ್ಯಾಂಡ್‌ ಆದ ಬಳಿಕ ಏರ್ ಇಂಡಿಯಾದ ಭದ್ರತಾ ಮುಖ್ಯಸ್ಥರು ಪ್ರಯಾಣಿಕರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಎಫ್‌ ಐಆರ್‌ ದಾಖಲಿಸಿ ಬಳಿಕ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.

Leave A Reply

Your email address will not be published.