Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

‘ವಿರೋಧಪಕ್ಷದವರಿಲ್ಲದೇ ಬಜೆಟ್ ಚರ್ಚೆಗೆ ಉತ್ತರ ನೀಡಿರುವುದು ಇದೇ ಮೊದಲು’ : ಸಿಎಂ ಸಿದ್ದರಾಮಯ್ಯ

0

ಬೆಂಗಳೂರು:ತಮ್ಮ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಹಾಗೂ 14 ಬಾರಿ ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಇದೇ ಮೊದಲ ಬಾರಿ ವಿರೋಧ ಪಕ್ಷದ ಉಪಸ್ಥಿತಿಯಿಲ್ಲದೇ ಬಜೆಟ್ ಚರ್ಚೆಗೆ ಉತ್ತರ ನೀಡುವಂತಹ ಪರಿಸ್ಥಿತಿ ಒದಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.

ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ,ಬಿಜೆಪಿಯವರು  ಪ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿಧಾನಮಂಡಲದ ಅಧಿವೇಶನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಬಿಟ್ಟು, ಹೊರಗೆ ಹೋರಾಟ ಮಾಡುವುದರಿಂದ ಪ್ರಯೋಜನವಿಲ್ಲ. ವಿರೋಧಪಕ್ಷದವರು ಚರ್ಚೆಗಳಲ್ಲಿ ಭಾಗವಹಿಸಲಿ ಎಂದರು.

ಮೂರು ವಾರಗಳ ಕಾಲ ಅಧಿವೇಶನವನ್ನು ನಡೆಸಲಾಯಿತು. ಆದರೆ ವಿಧಾನಸಭೆಗೆ ಆಗಮಿಸದೆ ಗದ್ದಲದಲ್ಲೇ ಸಮಯವನ್ನು ವ್ಯರ್ಥಗೊಳಿಸಿದರು.ಅವರು ನಡವಳಿಕೆ ಸರಿಯಿರದಿದ್ದ ಕಾರಣ , ಸಭಾಧ್ಯಕ್ಷರು ಕ್ರಮ ತೆಗೆದುಕೊಂಡಿದ್ದಾರೆ. ಸಭಾಧ್ಯಕ್ಷರ ಕ್ರಮಕ್ಕೂ , ನಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೈಸ್ ಹಗರಣದ ಆರೋಪದ ಕುರಿತು ಉತ್ತರಿಸಿ, ಕಾಂಗ್ರೆಸ್ ಸರ್ಕಾರದ ನಂತರ ಮೈತ್ರಿ ಸರ್ಕಾರ ಬಂದ ಸಂದರ್ಭದಲ್ಲಿಯೇ ಕ್ರಮ ತೆಗೆದುಕೊಳ್ಳಬಹುದಿತ್ತು. ತನಿಖೆ ನಡೆಸಲು ಕಾಂಗ್ರೆಸ್ ನವರು ಕೈಕಟ್ಟಿದ್ದರು ಎನ್ನುವುದು ಸುಳ್ಳು, ಸಾಲಮನ್ನಾ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಬೆಂಬಲ ನೀಡಲಿಲ್ಲವೇ , ಕಾಂಗ್ರಸ್ ಕೈಕಟ್ಟಿ ಹಾಕಿತ್ತು ಎಂದು ರಾಜಿನಾಮೆ ನೀಡಿದರೆ ? ತಮ್ಮ ಸ್ವಯಂತಪ್ಪಿನಿಂದಲೇ ಅವರು ಸರ್ಕಾರ ಕಳೆದುಕೊಳ್ಳುವಂತಾಯಿತು ಎಂದು ಹೇಳಿದರು.

Leave A Reply

Your email address will not be published.