ಕೆಲಸ ಸರ್ಕಾರವು ಉದ್ಯೋಗ ಅವಧಿಯ ವಿಚಾರದಲ್ಲಿ ಮಹತ್ವ ಹೆಜ್ಜೆಯನ್ನು ಇಟ್ಟಿದೆ. ವಿಶೇಷ ಅಗತ್ಯವುಳ್ಳ ಮಕ್ಕಳ ಪೋಷಕರಿಗೆ ಕೆಲಸದ ಸಮಯವನ್ನು ಸಡಿಲಿಸುವ ಮೂಲಕ ಅವರಿಗೆ ಬೆಂಬಲ ನೀಡಲು ಕೇರಳ ಸರ್ಕಾರವು ನಿರ್ಧಾರ ಮಾಡಿದೆ. ಶೇಕಡ 40 ಅಥವಾ ಅದಕ್ಕಿಂತ ಅಧಿಕ ಅಂಗವೈಕಲ್ಯ ಹೊಂದಿರುವ ಮಕ್ಕಳ ಪೋಷಕರಾಗಿರುವ ಸರ್ಕಾರಿ ನೌಕರರು ಮಾಸಿಕ 16 ಗಂಟೆಗಳ ಕೆಲಸದ ಅವಧಿ ಮನ್ನಾ ಪಡೆಯಬಹುದಾಗಿದೆ.
ಹೌದು ಈ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ, “ಈ ನಿರ್ಧಾರವು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸರ್ಕಾರದ ಧ್ಯೇಯೋದ್ದೇಶದ ಒಂದು ಭಾಗವಾಗಿದೆ. ಜನಸ್ನೇಹಿ ಸರ್ಕಾರ ರಚಿಸುವುದು ಮುಖ್ಯ ಉದ್ದೇಶವಾಗಿದೆ. ಈ ಕ್ರಮವು ಪೋಷಕರಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಅವರಿಗೆ ಅಗತ್ಯ ಸಹಕಾರವನ್ನು ನೀಡಲು ಸಹಾಯ ಮಾಡುತ್ತದೆ,” ಎಂದು ತಿಳಿಸಿದ್ದಾರೆ.
ಕೇರಳ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದ್ದೇಕೆ?
ತಿಂಗಳಿಗೆ 16 ಗಂಟೆಗಳ ಕಾಲ ಕೆಲಸದ ಅವಧಿಯನ್ನು ಮನ್ನಾ ಮಾಡಲಾಗಿದ್ದು, ತಮ್ಮ ಕೆಲಸ ಮತ್ತು ತಮ್ಮ ಮಕ್ಕಳ ಆರೈಕೆಯ ನಡುವೆ ಪೋಷಕರಿಗೆ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯವಾಗಲಿದೆ. ಈ ನಿರ್ಧಾರವು ಪೋಷಕರು ತಮ್ಮ ವಿಶೇಷಚೇತನ ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಮತ್ತು ಅವರಿಗೆ ವಿಶೇಷ ಗಮನವನ್ನು ಹರಿಸಲು ಅವಕಾಶ ನೀಡುತ್ತದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಬಜೆಟ್ 2023:ಯಾವುದು ಅಗ್ಗ, ಯಾವುದು ದುಬಾರಿ- ಇಲ್ಲಿದೆ ಲಿಸ್ಟ್.. ಕೇರಳ ಸರ್ಕಾರದ ಈ ನಿರ್ಧಾರವು ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಸರ್ಕಾರವನ್ನು ಶ್ಲಾಘಿಸಲಾಗುತ್ತಿದೆ. ಹೆಚ್ಚು ಸಹಾನುಭೂತಿ ಮತ್ತು ಸಮಾನ ಸಮಾಜವನ್ನು ನಿರ್ಮಿಸುವ ಪ್ರಮುಖ ಹೆಜ್ಜೆ ಇದು ಎಂದು ವಿವರಿಸಲಾಗಿದೆ. ಭಾರತದಲ್ಲಿ ಸಾಮಾನ್ಯ ಕೆಲಸದ ನಿಯಮಗಳು ಕಳೆದ ವರ್ಷ, ಕೇಂದ್ರ ಸರ್ಕಾರವು ಭಾರತದಲ್ಲಿ ಹಲವಾರು ಕಾರ್ಮಿಕ, ಉದ್ಯೋಗ ಮತ್ತು ಕೆಲಸದ ಕಾನೂನುಗಳನ್ನು ಒಟ್ಟುಗೂಡಿಸಿ ನಾಲ್ಕು ಕಾರ್ಮಿಕ ಕೋಡ್‌ಗಳನ್ನು ರಚಿಸಿದೆ.
ವೇತನಗಳ ಸಂಹಿತೆ 2019, ಕೈಗಾರಿಕಾ ಸಂಬಂಧಗಳ ಕೋಡ್ 2020, ಸಾಮಾಜಿಕ ಭದ್ರತೆ 2020, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಷರತ್ತುಗಳ ಕೋಡ್ 2020 ಈ ಪ್ರಮುಖ ನಾಲ್ಕು ಕೋಡ್‌ಗಳಾಗಿದೆ. ಈ ಕೋಡ್‌ಗಳನ್ನು ಸಾಮಾನ್ಯ ಮಾಹಿತಿಗಾಗಿ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದೆ. ಕಾರ್ಮಿಕ ಸಂಹಿತೆಗಳ ಪ್ರಕಾರ, ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಬೆಂಬಲಿಸಲು ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ಸಕಾಲಿಕ ವೇತನ ಪಾವತಿಗೆ ಶಾಸನಬದ್ಧ ಹಕ್ಕನ್ನು ಒದಗಿಸಲಾಗಿದೆ.
ಇದಲ್ಲದೆ, ಕಾರ್ಮಿಕ ಸಂಹಿತೆಗಳ ಪ್ರಕಾರ ಪ್ರತಿ ಕೆಲಸಗಾರನಿಗೆ 180 ದಿನಗಳವರೆಗೆ ಕೆಲಸ ಮಾಡಿದ ನಂತರ ವೇತನದೊಂದಿಗೆ ವಾರ್ಷಿಕ ರಜೆಗೆ ಅರ್ಹತೆ ಇದೆ. ಈ ಹಿಂದೆ 240 ದಿನಗಳವರೆಗೆ ಕೆಲಸ ಮಾಡಿದ ನಂತರ ವೇತನದೊಂದಿಗೆ ವಾರ್ಷಿಕ ರಜೆಗೆ ಅರ್ಹತೆ ಇತ್ತು. ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಸೇವೆಯಲ್ಲಿರುವಾಗ ರಜೆಯನ್ನು ಪಡೆದುಕೊಳ್ಳುವ ಅವಕಾಶವು ಇದೆ.