Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಶಂಕಿತ ಉಗ್ರರಿಗೆ ಉಗ್ರ ನಾಸಿರ್ ನಂಟು.! – 7 ಗನ್, 42 ಗುಂಡು, ಸ್ಯಾಟಲೈಟ್ ಫೋನ್ ವಶ

0

ಬೆಂಗಳೂರು: ಕೇಂದ್ರ ಗುಪ್ತಚರ ಮಾಹಿತಿ‌ ಮೇರೆಗೆ ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಕನಕನಗರ ಬಳಿಯ ಸುಲ್ತಾನ್ ಪಾಳ್ಯ ಮಸೀದಿ ಬಳಿ ಟೆರರ್ ಮೀಟಿಂಗ್ ವೇಳೆ ಆರೋಪಿಗಳು ಸಿಸಿಬಿ ಬಲಗೆ ಬಿದ್ದಿದ್ದಾರೆ. 2017ರಲ್ಲಿ ಆರ್‌ಟಿ ನಗರದ ನೂರ್ ಕೊಲೆ ಕೇಸ್‌ನಲ್ಲಿ ಬಂಧನವಾಗಿದ್ದ ಆರೋಪಿಗಳ ಪೈಕಿ ಐವರು ಟೆರರ್ ಲಿಂಕ್ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿ ಜುನೈದ್ ಸದ್ಯ ತಲೆ‌ಮರೆಸಿಕೊಂಡಿದ್ದು, ಇವನ ಸಹಚರರಾಗಿರುವ ಸುಹೈಲ್, ಉಮರ್, ತಬ್ರೇಜ್, ಮುದಾಸಿರ್ ಮತ್ತು ಫೈಜಲ್ ರಬ್ಬಾನಿ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನು ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದಾಗ 2008ರ ಬೆಂಗಳೂರು ಸಿರಿಯಲ್ ಬಾಂಬ್ ಬ್ಲಾಸ್ಟ್ ಕೇಸ್‌ನ ರುವಾರಿ ನಾಸೀರ್ ಸಂಪರ್ಕದಲ್ಲಿದ್ದ ಜುನೈದ್ ಉಗ್ರ ಚಟುವಟಿಕೆ ಆಸಕ್ತಿ ತೋರಿ ನಾಸೀರ್ ಹೇಳಿದಂತೆ ವಿದ್ವಾಂಸಕ ಕೃತ್ಯ ನಡೆಸಲು ತಯಾರಿ ನಡೆಸಿದ್ದನಂತೆ. ಅಲ್ಲದೆ ಕೊಲೆ ಕೇಸ್‌ನಲ್ಲಿ ಬೇಲ್ ಮೇಲೆ ಹೊರ ಬಂದ ನಾಸೀರ್ ಮತ್ತೆ ಕೋರ್ಟ್‌ಗೆ ಹಾಜರಾಗದೆ ತಲೆ‌ಮರೆಸಿಕೊಂಡಿದ್ದ. ದೂರದಲ್ಲೇ ಕುಳಿತು ಜುನೈದ್ ತನ್ನ ಸ್ನೇಹಿತರನ್ನ ಉಗ್ರ ಚಟುವಟಿಕೆ ಟ್ರೈನಿಂಗ್ ಕೊಡುತ್ತಿದ್ದನಂತೆ. ಇನ್ನು ಸಿಸಿಬಿ ಪೊಲೀಸರು ಆರೋಪಿಗಳ ಬಂಧನಕ್ಕೆ ತೆರಳಿದಾಗ ಸುಹೈಲ್ ಮನೆಯಲ್ಲಿ ಉಗ್ರಚಟುವಟಿಕೆ ಸಂಬಂಧಿಸಿದ ಮೀಟಿಂಗ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಗಳ ಬಳಿ ಸಿಕ್ಕಿರುವ ವಸ್ತುಗಳನ್ನ ನೋಡಿ ಸಿಸಿಬಿ ಪೊಲೀಸ್ರೆ ಶಾಕ್ ಆಗಿದ್ದಾರೆ. 7 ಕಂಟ್ರಿ ಮೇಡ್ ಪಿಸ್ತೂಲ್, 42 ಜೀವಂತ ಗುಂಡುಗಳು, ಎರಡು ಸ್ಯಾಟಲೈಟ್ ಫೋನ್ ಮಾದರಿ ವಾಕಿಟಾಕಿ, ಮೊಬೈಲ್ ಫೋನ್ ಮತ್ತು ವಿವಿಧ ಕಂಪನಿ ಸಿಮ್‌ಗಳು, ಲ್ಯಾಪ್ ಟಾಪ್ ಪತ್ತೆಯಾಗಿವೆ. ಇನ್ನು ಆರೋಪಗಳು ಗ್ರೆನೇಡ್ ಮಾದರಿ ವಸ್ತುಗಳನ್ನು ಶೇಖರಿಸಿರೋ ಮಾಹಿತಿ ಕೂಡ ಇದೆ. ಬೆಂಗಳೂರಿನಲ್ಲಿ 2008 ಸಿರಿಯಲ್ ಬ್ಲಾಸ್ಟ್‌ಗಿಂತ ದೊಡ್ಡ ಮಟ್ಟದ ವಿದ್ವಂಸಕ ಕೃತ್ಯಕ್ಕೆ ಶಂಕಿತರು ತಯಾರಿ ನಡೆಸಿದ್ದರು ಅನ್ನೋ ಆರೋಪ ಕೇಳಿ ಬಂದಿದೆ. ಸದ್ಯ ಇವರಿಗೆ ಯಾರು ಹಣ ಸಹಾಯ ಮಾಡ್ತಿದ್ರು? ಯಾರ‌ ಸಂಪರ್ಕದಲ್ಲಿದ್ರು? ಇವ್ರ ತಂಡದಲ್ಲಿ ಇನ್ನೂ ಎಷ್ಟು ಜನ ಇದ್ರು? ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ.

Leave A Reply

Your email address will not be published.