ಬಾಲಿವುಡ್ ನಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಜತೆ ತೆರೆ ಹಂಚಿಕೊಂಡಿರುವ ರಶ್ಮಿಕಾ, ಇದೀಗ ಶಾಹಿದ್ ಕಪೂರ್ ಮುಖ್ಯ ಭೂಮಿಕೆಯ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಡಿಕೆಶಿ, ಸಿದ್ದು ನಿವಾಸದ ಮುಂದೆ ಬೆಂಬಲಿಗರಿಂದ ಮುಂದಿನ ಸಿಎಂ ಫ್ಲೆಕ್ಸ್ ಅಳವಡಿಕೆ
ಈಗಾಗಲೇ ಬಾಲಿವುಡ್ ನಲ್ಲಿ ರಶ್ಮಿಕಾ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಣಬೀರ್ ಕಪೂರ್ ಜತೆ ಆನಿಮಲ್ ಚಿತ್ರದಲ್ಲಿ ನಟಿಸುತ್ತಿದ್ದು, ವಿಕ್ಕಿ ಕೌಶಲ್ ಜತೆಯೂ ಒಂದು ಸಿನಿಮಾ ಮಾಡುತ್ತಿದ್ದಾರೆ. ಅಲ್ಲದೇ, ಛತ್ರಪತಿ ಶಿವಾಜಿ ಕುರಿತಾದ ಸಿನಿಮಾಗೂ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಶಾಹಿತ್ ಅವರ ಹೊಸ ಸಿನಿಮಾ ಕೂಡ ರಶ್ಮಿಕಾಗೆ ಒಲಿದು ಬಂದಿದೆ. ದಿಲ್ ರಾಜು, ಏಕ್ತಾ ಕಪೂರ್ ಜಂಟಿಯಾಗಿ ನಿರ್ಮಾಣ ಮಾಡಲಿರುವ, ಅನೀಸ್ ಬಾಜ್ಮಿ ನಿರ್ದೇಶನದಲ್ಲಿ ತಯಾರಾಗುವ ಹೊಸ ಚಿತ್ರಕ್ಕೆ ರಶ್ಮಿಕಾ ನಾಯಕಿ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಶಾಹಿದ್ ಹೊಸ ಬಗೆಯ ಪಾತ್ರ ಮಾಡುತ್ತಿರುವುದರಿಂದ ರಶ್ಮಿಕಾ ನಾಯಕಿಯಾದರೆ ಬೆಸ್ಟ್ ಎನ್ನುವ ಮಾತು ಚಿತ್ರತಂಡದಿಂದ ಬಂದಿದೆಯಂತೆ. ಹಾಗಾಗಿ ಅನೀಸ್ ಈಗಾಗಲೇ ರಶ್ಮಿಕಾ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.