ಶಿವಮೊಗ್ಗ ಸಿಟಿಯಲ್ಲಿ ಬೆಂಗಳೂರು ಸ್ಟೈಲ್ನಲ್ಲಿ ನಡೆದಿದ್ದ ರಾಬರಿ ಪ್ರಕರಣವನ್ನು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಓರ್ವ ಮಂಗಳಮುಖಿಯನ್ನು ಅರೆಸ್ಟ್ ಮಾಡಿದ್ದು, ಈ ಸಂಬಂಧ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆಗೊಳಿಸಿದ್ದಾರೆ.
ನಡೆದಿದ್ದೇನು?
ಇವತ್ತಿಗೆ ಎರಡು ದಿನಗಳ ಹಿಂದೆ, ಅಂದರೆ ದಿನಾಂಕ: 19-08-2023 ರ ಮಧ್ಯರಾತ್ರಿ 01-15 ಸುಮಾರಿಗೆ ವ್ಯಕ್ತಿಯೊಬ್ಬರು ಶಿವಮೊಗ್ಗ ಎನ್.ಟಿ ರಸ್ತೆಯಲ್ಲಿ ಕಾರಿನಲ್ಲಿ ಬರುತ್ತಿದ್ದರು. ಈ ವೇಳೇ ಕಾರಿಗೆ ಕೈ ಅಡ್ಡ ಹಾಕಿ ಮಹಿಳೆಯೊಬ್ಬರು ಡ್ರಾಫ್ ಕೇಳಿದ್ಧಾರೆ. ಆನಂತರ ಕಾರನ್ನು ಹತ್ತಿಕೊಂಡ ಆಕೆ, ಕಾರ್ ಡ್ರೈವರ್ಗೆ ಚಾಕು ತೋರಿಸಿ ಹೆದರಿಸಿ ಕಾರನ್ನು ವಾಪಾಸ್ ಎನ್.ಟಿ ರಸ್ತೆ ಕಡೆ ತಿರುಗಿಸಲು ಹೇಳಿದ್ದಾಳೆ. ಅಲ್ಲದೆ, ಮ್ಯಾಕ್ಸ್ ಆಸ್ಪತ್ರೆಯ ಎದುರುಗಡೆ ಕಾರ್ ನ್ನು ನಿಲ್ಲಿಸಿ ಡ್ರೈವರ್ನಿಂದ ಸುಮಾರು 92,000/-ರೂ ಬೆಲೆಬಾಳುವ 23 ಗ್ರಾಂ ತೂಕದ ಬಂಗಾರದ ಸರವನ್ನು ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾಳೆ. ಈ ಪ್ರಕರಣವನ್ನು ಇದೀಗ ದೊಡ್ಡಪೇಟೆ ಪೊಲೀಸರು ಭೇದಿಸಿದ್ದಾರೆ. ಮಂಗಳಮುಖಿ ಮಹಿಳೆಯಾದ ರವಿ @ ಸ್ವೀಟಿಯನ್ನ ಪೊಲೀಸರು ಬಂಧಿಸಿದ್ದಾರೆ. ಈಕೆಯಿಂದ 92,000/-ರೂ ಬೆಲೆಬಾಳುವ 23 ಗ್ರಾಂ ತೂಕದ ಬಂಗಾರದ ಸರವನ್ನು ಜಪ್ತಿ ಮಾಡಿದ್ದಾರೆ.
ಈ ತನಿಖಾ ತಂಡದಲ್ಲಿ ಇನ್ಸ್ ಪೆಕ್ಟರ್ ಅಂಜನ್ ಕುಮಾರ್, ವಸಂತ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಮಂಜುನಾಥ ಪ್ರೋ.ಡಿವೈಎಸ್ಪಿ, ಚಂದ್ರಶೇಖರ್, ಎಎಸ್‌ಐ, ಹೆಚ್ ಸಿ-288 ಲಚ್ಚಾನಾಯ್ಕ, ಪಿಸಿ-1321 ಚಂದ್ರನಾಯ್ಕ, ಪಿಸಿ-1503 ನಿತಿನ್, ಪಿಸಿ-1484 ರಮೇಶ್ ರವರು ಪಾಲ್ಗೊಂಡಿದ್ದರು.