ಚಿತ್ರದುರ್ಗ: 2023ನೇ ಸಾಲಿನಲ್ಲಿ ರಾಜ್ಯ ಸರ್ಕಾರಿ ಅಧಿಕಾರಿ, ನೌಕರರಿಗೆ (ಗ್ರೂಪ್ ಎ.ಬಿ.ಸಿ ಮತ್ತು ಡಿ) ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿದ್ದು. ನಾಮನಿರ್ದೇಶನಗಳನ್ನು ಸಲ್ಲಿಸಲು ಇದೇ ಏಪ್ರಿಲ್ 10 ರವರಗೆ ಕಾಲಾವಕಾಶ ವಿಸ್ತರಿಸಲಾಗಿದೆ.
ಆದ್ದರಿಂದ ಜಿಲ್ಲಾ, ರಾಜ್ಯ ಮಟ್ಟದ ಪ್ರಶಸ್ತಿ ಆಯ್ಕೆಗೆ ನಾಮ ನಿರ್ದೇಶನಗಳನ್ನು ಏಪ್ರಿಲ್ 10ರೊಳಗಾಗಿ ಆನ್‍ಲೈನ್ ಜಾಲತಾಣ https://dparar.karnataka.gov.in/ ಅಥವಾ https://sarvothamaawards.karnataka.gov.in ಮೂಲಕ ಮಾತ್ರವೇ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.