Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಸಾಲಗಾರರಿಗೆ ಸಂತಸ ಸುದ್ದಿಯನ್ನು ನೀಡಿದ ಆರ್​ಬಿಐ : ರೆಪೊ ದರವನ್ನು ಯಥಾಸ್ಥಿತಿಯಲ್ಲಿಡಲು ನಿರ್ಧಾರ

0

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರೆಪೋ ದರವನ್ನು ಶೇ . 6.5 ರಲ್ಲಿ ಮುಂದುವರಿಸಲು ನಿರ್ಧರಿಸಿದೆ . ಜೂನ್ 6 ರಿಂದ 3 ದಿನಗಳ ಕಾಲ ನಡೆದ ಆರ್​ಬಿಐನ ಹಣಕಾಸು ನೀತಿ ಸಮಿತಿ ಸಭೆ ಮುಕ್ತಾಗೊಂಡ ಬಳಿಕ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದರು. ಹಣದುಬ್ಬರ ಕಡಿಮೆ ಆಗಿರುವುದರಿಂದ ಈ ಬಾರಿ ಬಡ್ಡಿ ದರ ಏರಿಕೆಯನ್ನು ನಿಲ್ಲಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು. ರೆಪೋ ದರ ಮಾತ್ರವಲ್ಲ ರಿವರ್ಸ್ ರಿಪೋ ಮತ್ತಿತರ ದರಗಳಲ್ಲೂ ಬದಲಾವಣೆಗಳಾಗಿಲ್ಲ. ಹಣದುಬ್ಬರ ಇಳಿಕೆಯಾದರೂ ಸಮಾಧಾನಪಡುವಂತಹ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದೂ ಎಚ್ಚರಿಸಿದ್ದಾರೆ. ಹೆಡ್​ಲೈನ್ ಹಣದುಬ್ಬರವು ಕಡಿಮೆ ಆಗಿದ್ದರೂ ಅದು ನಮ್ಮ ಗುರಿಗಿಂತ ಮೇಲ್ಮಟ್ಟದಲ್ಲೇ ಇದೆ. ಈ ಹಣದುಬ್ಬರದ ಬಗ್ಗೆ ಅರ್ಜುನನ ಕಣ್ಣಿಡುವುದು ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸೇರಿ ಎಂಪಿಸಿಯ 6 ಸದಸ್ಯರು 3 ದಿನಗಳ ಕಾಲ ನಡೆಸಿದ ಸಭೆಯಲ್ಲಿ ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿಸುವ ಬಗ್ಗೆ ಒಮ್ಮತದ ನಿರ್ಧಾರ ಕೈಗೊಂಡರೆನ್ನಲಾಗಿದೆ. ಕಳೆದ ಮೇ ತಿಂಗಳಿಂದೀಚೆ ರೆಪೋ ದರವನ್ನು ಸತತವಾಗಿ ಏರಿಸುತ್ತಾ ಬರಲಾಗಿದೆ. ಈ ಅವಧಿಯಲ್ಲಿ 250 ಬೇಸಿಸ್ ಪಾಯಿಂಟ್​ಗಳಷ್ಟು ಏರಿಕೆ ಮಾಡಲಾಗಿದೆ. ಶೇ. 7ಕ್ಕಿಂತ ಹೆಚ್ಚು ಇದ್ದ ಹಣದುಬ್ಬರ ಏಪ್ರಿಲ್ ತಿಂಗಳಲ್ಲಿ ಶೇ. 4.7ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ರೆಪೋ ದರದ ಏರಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ರೆಪೋ ದರ ಎಂಬುದು ಕಮರ್ಷಿಯಲ್ ಬ್ಯಾಂಕುಗಳು ಆರ್​ಬಿಐನಿಂದ ಪಡೆಯುವ ಸಾಲಕ್ಕೆ ತೆರಬೇಕಾದ ಬಡ್ಡಿ ದರ. ಇದರಲ್ಲಿ ಹೆಚ್ಚಳವಾದರೆ ಬ್ಯಾಂಕುಗಳಲ್ಲಿನ ಸಾಲದ ಮೇಲಿನ ಬಡ್ಡಿಯೂ ಹೆಚ್ಚಾಗಬಹುದು.

Leave A Reply

Your email address will not be published.