ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರು ಮಂಗಳವಾರ ಭೇಟಿ ಮಾಡಿ ಶುಭ ಹಾರೈಸಿದರು. ‘ನಾಡಿನಲ್ಲಿ ಮಳೆ, ಬೆಳೆ ಸಮೃದ್ಧವಾಗಲಿ.
IPL 2023: ಗುಜರಾತ್ v/s ಚೆನ್ನೈ ಸೂಪರ್ ಕಿಂಗ್ ಹಣಾಹಣಿ – ಗೆಲುವು ಯಾರ ಪಾಲಿಗೆ?
ಉತ್ತಮ ಆಡಳಿತ ನಡೆಸುವಂತಾಗಲಿ‘ ಎಂದು ತಿಮ್ಮಕ್ಕ ಅವರು ಮುಖ್ಯಮಂತ್ರಿಗೆ ಶುಭ ಹಾರೈಸಿದರು. ‘ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಸರ್ಕಾರ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತದೆ‘ ಎಂದು ತಿಮ್ಮಕ್ಕ ಅವರಿಗೆ ಸಿದ್ದರಾಮಯ್ಯ ತಿಳಿಸಿದರು.