ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರು. ಆದರೆ ಅಂತಿಮವಾಗಿ ಸಿದ್ದರಾಮಯ್ಯ ಅವರು ಸಿಎಂ, ಡಿ.ಕೆ.ಶಿವಕುಮಾರ್ ಅವರು ಡಿಸಿಎಂ ಆಗಿ ಎಐಸಿಸಿ ಘೋಷಣೆ ಮಾಡಿದೆ. ಇದಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ದೂರವಾಣಿ ಮೂಲಕ ಮಾತನಾಡಿ ಸಿಎಂ ಸ್ಥಾನದ ಪಟ್ಟು ಕೈಬಿಡುವಂತೆ ಕೇಳಿಕೊಂಡು ಕೆಲ ಭರವಸೆ ನೀಡಿದ್ದರು ಎಂದು ತಿಳಿದುಬಂದಿದೆ. ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡಿದ ಸೋನಿಯಾ ಗಾಂಧಿ, ‘ನಿಮ್ಮ ಬೇಡಿಕೆ ಸರಿಯಾಗಿದೆ. ಸದ್ಯಕ್ಕೆ ಪಕ್ಷದ ಹಿತದೃಷ್ಟಿಯಿಂದ ಎರಡು ವರ್ಷ ಸಿದ್ದರಾಯಮ್ಮ ಅವರಿಗೆ ಅವಕಾಶ ಬಿಟ್ಟುಕೊಡಿ. ಎರಡು ವರ್ಷ ಆದ ಬಳಿಕ ನಾವೇ ಅಧಿಕಾರ ಹಸ್ತಾಂತರ ಮಾಡಿಸುತ್ತೇವೆ. ಈಗ ಡಿಸಿಎಂ ಆಗಿ, ಬೇಕಿದ್ದರೆ ನೀವೊಬ್ಬರೇ ಡಿಸಿಎಂ ಆಗಿ. ಅಷ್ಟೇ ಅಲ್ಲದೆ ನೀವು ಯಾವ ಖಾತೆಯನ್ನು ಕೇಳುತ್ತೀರೋ ಅದನ್ನೇ ಕೊಡುತ್ತೇವೆ. ಒಂದು ವೇಳೆ ಸಿದ್ದರಾಮಯ್ಯ ಅವರೊಂದಿಗೆ ಸಂಪುಟದಲ್ಲಿ ಒಟ್ಟಾಗಿ ಕೆಲಸ ಮಾಡಲು ಇಷ್ಟವಿಲ್ಲ ಎಂದಾದರೆ, ನೀವು ಪಕ್ಷದ ಜವಾಬ್ದಾರಿಯಲ್ಲಿ ಮುಂದುವರಿಯಿರಿ ಎಂದು ಆಫರ್ ಕೊಟಿದ್ದರು ಎನ್ನಲಾಗಿದೆ. ಪಕ್ಷಕ್ಕಾಗಿ ನಿಮ್ಮ ಪ್ರಯತ್ನದ ಬಗ್ಗೆ ನಮಗೆ ಸಂಪೂರ್ಣ ಅರಿವು ಇದೆ. ಈಗಲೇ ಸಿಎಂ ಬೇಕು ಅಂತ ಹಠ ಹಿಡಿಯಬೇಡಿ. ಬೇರೆ ರಾಜ್ಯದಲ್ಲಾದಂತೆ ಕರ್ನಾಟಕದಲ್ಲಿ ಆಗಲು ನಾವು ಬಿಡುವುದಿಲ್ಲ ಎಂದು ಸೋನಿಯಾ ಗಾಂಧಿ ಅವರು ಡಿಕೆ ಶಿವಕುಮಾರ್ ಅವರಿಗೆ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಡಿಕೆ ಶಿವಕುಮಾರ್ ಅವರು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಅಲ್ಲದೆ, ಎರಡು ಪ್ರಮುಖ ಖಾತೆಗಳಾದ ಇಂಧನ ಮತ್ತು ನೀರಾವರಿ ಖಾತೆಯ ಮೇಲೆ ಕಣ್ಣೀಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
[vc_row][vc_column]
BREAKING NEWS
- ಪಿಎಸ್ಐ (PSI)ಗಳು ಬರೆದಿರುವ ಪತ್ರ(LETTER)ದಲ್ಲಿ ಏನಿದೆ…? ನಿಯಮಾವಳಿ ಸರಿಪಡಿಸಿ ಎನ್ನುತ್ತಿರುವುದೇಕೆ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಗಳು…?
- ಒಡಿಶಾ: ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ
- ವಿಶ್ವ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಭಾರತ ಮೂಲದ ಅಜಯ್ ಬಂಗಾ ನೇಮಕ
- ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರ
- ಮುರುಘಾ ಮಠಕ್ಕೆ ಎಂ.ಬಿ.ಪಾಟೀಲ್ ಭೇಟಿ.!
- ಕಂಬಳ ಇತಿಹಾಸದಲ್ಲಿ ಹೊಸ ಅಧ್ಯಾಯ: ಯುವತಿಯರಿಗೆ ತರಬೇತಿ ನೀಡಲು ಅಕಾಡೆಮಿ ಸಿದ್ಧ
- ರಾಷ್ಟ್ರೀಯ ಹ್ಯಾಂಡ್ ಬಾಲ್ ತಂಡಕ್ಕೆ ದುರ್ಗದ ಹುಡುಗರ ಆಯ್ಕೆ.!
- ಜಿಲ್ಲಾ ಉಸ್ತುವಾರಿ ಸಚಿವರ ನೇಮಕ? ಯಾವ್ಯಾವ ಜಿಲ್ಲೆ ಜವಾಬ್ಧಾರಿ ಯಾರ ಹೆಗಲಿಗೆ? ಸಾಂಭವ್ಯರ ಪಟ್ಟಿ ಇಲ್ಲಿದೆ
- ಒಡಿಶಾ: ಭೀಕರ ರೈಲು ಅಪಘಾತಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ಪ್ರಾಥಮಿಕ ವರದಿ ಮಾಹಿತಿ
- ಕಾರ್ಕಳ: ಮೀನು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ