ಸಿಕ್ಕಿಂ: ಗಾಂಗ್ಟಕ್ ಪ್ರದೇಶದಲ್ಲಿ ಧಾರಕರ ಮಳೆ ಹಾಗೂ ಭೂ ಕುಸಿತದಿಂದ ರಸ್ತೆ ಸಂಚಾರ ಬಂದ್ ಆದ ಕಾರಣ 500 ಪ್ರವಾಸಿಗರು ಸಿಲುಕಿಕೊಂಡಿದ್ದರು. ಅವರನ್ನು ಭಾರತೀಯ ಸೇನೆಯು ರಕ್ಷಣೆ ಮಾಡಿದೆ.
ರಾಜ್ಯದ ಲಾಚೆನ್ ಲಾಚುಂಗ್ ಮತ್ತು ಚುಂಗ್ತಾಂಗ್‌ಗಳಲ್ಲಿ ಭಾರೀ ಮಳೆಯಾಗಿದ್ದು, ಲಾಚೆನ್ ಮತ್ತು ಲಾಚುಂಗ್ ಕಣಿವೆಗೆ ಪ್ರಯಾಣಿಸುತ್ತಿದ್ದ ಸುಮಾರು 500 ಪ್ರವಾಸಿಗರು ಮಾರ್ಗ ಮಧ್ಯದಲ್ಲಿನ ಭೂಕುಸಿತ ಮತ್ತು ರಸ್ತೆ ತಡೆಗಳಿಂದಾಗಿ ಚುಂಗ್ತಾಂಗ್ ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.
ಇದರಲ್ಲಿ 216 ಪುರುಷರು, 113 ಮಹಿಳೆಯರು ಮತ್ತು 54 ಮಕ್ಕಳಿದ್ದು, ಇವರನ್ನು ಸೇನೆಯು ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ರಕ್ಷಣೆ ಮಾಡಿದೆ. ಬಳಿಕ ಪ್ರವಾಸಿಗರನ್ನು ಮೂರು ಸೇನಾ ಕ್ಯಾಂಪ್ ಗಳಿಗೆ ಸ್ಥಳಾಂತರಿಸಿ, ಅವರಿಗೆ ಊಟ, ತಿಂಡಿ ಹಾಗೂ ಉಡುಪುಗಳನ್ನು ನೀಡಿದ್ದಾರೆ. ಈ ಸೇನಾಪಡೆಗಳ ಕಾರ್ಯಚರಣೆಯಿಂದ ಅನಾಹುತವೊಂದು ತಪ್ಪಿದೆ. ರಸ್ತೆ ಸುಗಮವಾಗುವವರೆಗೆ ಪ್ರವಾಸಿಗರಿಗೆ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಲಾಗಿದೆ.