ಬೆಂಗಳೂರು: ಕೊನೆಗೂ ತಮ್ಮ ಮಗನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕೆಂದುಕೊಂಡಿದ್ದ ಮಾಜಿ ಸಿಎಂ ಯಡಿಯೂರಪ್ಪಗೆ ಹಿನ್ನಡೆಯಾದಂತಾಗಿದೆ. ಜೊತೆಗೆ ಸಿ.ಟಿ.ರವಿ ಬೆನ್ನಿಗೆ ನಿಂತಿರೋ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಕೈ ಮೇಲಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಈ ಮಾತಿಗೆ ಪುಷ್ಟಿ ಎಂಬಂತೆ ಬಿಜೆಪಿ ಹೈಕಮಾಂಡ್ ಬುಲಾವ್ ಮೇರೆಗೆ ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ನಿನ್ನೆ ದಿಢೀರನೆ ದೆಹಲಿಗೆ ಪ್ರಯಾಣ ಬೆಳೆಸಿರೋದು ಮಹತ್ವದ ಬೆಳವಣಿಗೆ ಎನ್ನಿಸಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ.ರವಿ ಅವರನ್ನು ಬಿಡುಗಡೆ ಮಾಡಿದ ನಂತರ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷೆಗಳ ಪಟ್ಟಿಯಲ್ಲಿ ರವಿ ಅವರ ಹೆಸರು ಮುನ್ನೆಲೆಗೆ ಬಂದಿತ್ತು. ಗೌಡ ಸಮುದಾಯಕ್ಕೆ ಸೇರಿದ ಮತ್ತು ಬಿಜೆಪಿಯ ಕಟ್ಟಾ ಕಟ್ಟಾಳುವೂ ಎನ್ನಿಸಿದ ಫೈರ್ ಬ್ರ್ಯಾಂಡ್ ಖ್ಯಾತಿಯ ಸಿ.ಟಿ.ರವಿಯವರೇ ಬಿಜೆಪಿ ರಾಜ್ಯಾಧ್ಯಕ್ಷರಾಗಲು ಸೂಕ್ತವಾದ ವ್ಯಕ್ತಿ ಎಂದು ಕಮಲ ಪಾಳಯದ ವರಿಷ್ಠರು ನಿರ್ಧರಿಸಿದಂತಿದೆ. ಹೀಗಾಗಿ ಬಹುಷ ಸಿ.ಟಿ.ರವಿ ಅವರನ್ನು ಇದೇ ವಿಚಾರಕ್ಕಾಗಿ ಹೈಕಮಾಂಡ್ ಕರೆಯಿಸಿಕೊಂಡಿರಬಹುದು ಅಂತಾ ಬಿಜೆಪಿ ಬಲ್ಲ ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ ಅವರು, ನನಗೇನೂ ಗೊತ್ತಿಲ್ಲವೆಂದಷ್ಟೇ ಹೇಳಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಪರಿಶಿಷ್ಟ ಜಾತಿಯವರಿಗೆ ಮಣೆ ಹಾಕಬೇಕೆಂಬ ಉದ್ದೇಶದಿಂದ ಬಿಜೆಪಿ ಸಾರಥ್ಯವನ್ನು ಈ ಬಾರಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ವಹಿಸಲಿದೆ ಎಂವ ಮಾತು ನಿನ್ನೆಯವರೆಗೆ ಕೇಳಿ ಬಂದಿತ್ತು. ಇನ್ನು, ಶಿಕಾರಿಪುರ ಶಾಸಕ ಮತ್ತು ಬಿಎಸ್ ವೈ ಪುತ್ರ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನು ಸದ್ಯ ಕಟ್ಟಲಾಗದು ಅಂತಾ ಹೈಕಮಾಂಡ್ ಕಡ್ಡಿ ಮುರಿದಂತೆ ಹೇಳಿದಾಗ, ಬಿಎಸ್ ವೈ ಅವರ “ಬಿ ಆಪ್ಶನ್” ಶೋಭಾ ಕರಂದ್ಲಾಜೆಗೆ ಅಧ್ಯಕ್ಷ ಸ್ಥಾನಮಾನ ಸಿಗಬೇಕೆಂಬ ಬೇಡಿಕೆಗೂ ಮನ್ನಣೆ ಸಿಕ್ಕಂತಿಲ್ಲ. ನಳೀನ್ ಕುಮಾರ್ ಕಟೀಲ್ ಅವರ ಅಧಿಕಾರದ ಅವಧಿ ಈಗಾಗಲೇ ಮುಗಿದಿದ್ದು, ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ತೂಗಿ ಅಳೆದು ಅಧ್ಯಕ್ಷನ ಆಯ್ಕೆ ಮಾಡಲು ಮುಂದಾದಂತಿದೆ. ಬಹುಷ: ಸಿ.ಟಿ.ರವಿ ಅವರ ಹೆಸರು ಅಂತಿಮಗೊಂಡರೆ ಇಂದು ಬಿಜೆಪಿ ಅಧ್ಯಕ್ಷ ಹುದ್ದೆಯೊಂದಿಗೆ ಅವರು ರಾಜ್ಯಕ್ಕೆ ಹಿಂದಿರಗಬಹುದು ಅಂತಾ ಹೇಳಲಾಗುತ್ತಿದೆ.
[vc_row][vc_column]
BREAKING NEWS
- ನಿಯಮ ಉಲ್ಲಂಘನೆ ಮಾಡಿಯೂ ಟ್ರಾಫಿಕ್ ಪೊಲೀಸರಿಗೆ ಯುವತಿಯಿಂದ ಅವಾಜ್!
- ‘ಕಾವೇರಿ ನೆಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಮಾಡುತ್ತಿದೆ’- ಸಿದ್ದರಾಮಯ್ಯ
- ಭಾರತೀಯ ವಾಯುಪಡೆಗೆ C-295 ಸರಕು ವಿಮಾನ ಸೇರ್ಪಡೆ
- ವಿಶಾಖಪಟ್ಟಣಂ ಮೃಗಾಲಯದಲ್ಲಿ 18 ವರ್ಷದ ಸಿಂಹಿಣಿ ಹೃದಯಾಘಾತದಿಂದ ಸಾವು
- ‘ಶಾಂತಿಯುತ ಹೋರಾಟಕ್ಕೆ ಸರ್ಕಾರ ಅಡಚಣೆ ಮಾಡಲ್ಲ’: ಡಿಕೆಶಿ
- ಕಾವೇರಿ ನೀರು ವಿವಾದ: ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ದೇವೇಗೌಡ
- ಇಂದು ಮೊದಲ ಬಾರಿಗೆ ಇಡೀ ರಾಜ್ಯದಾದ್ಯಂತ ಏಕ ಕಾಲಕ್ಕೆ “ಜನತಾ ದರ್ಶನ”
- ‘ನನ್ನ ವಿರುದ್ಧ ಹೈದರ್ಬಾದ್ನಲ್ಲಿ ಸ್ಪರ್ಧಿಸಿ ‘- ರಾಹುಲ್ಗೆ ಓವೈಸಿ ಸವಾಲು
- ಮರೆತೂ ಕೂಡ ಈ ಸಮಯದಲ್ಲಿ ಮನೆ ಕಸ ಗುಡಿಸಬೇಡಿ – ಪೊರಕೆಗೆ ಕಾಲಿನಿಂದ ತುಳಿಯೋದ್ರಿಂದ ಬರುತ್ತೆ ಈ ಸಮಸ್ಯೆ..!!
- ಚೀನಾದಲ್ಲಿ ಮತ್ತೊಂದು ಆತಂಕಕಾರಿ ಕೊರೋನಾ ವೈರಸ್ ಪತ್ತೆ: ವೈರಾಣುತಜ್ಞರಿಂದ ಅಪಾಯದ ಎಚ್ಚರಿಕೆ