ನವದೆಹಲಿ: ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಹಿರಿಯ ವಕೀಲ ಕಲ್ಪತಿ ವೆಂಕಟರಮಣ ವಿಶ್ವನಾಥನ್ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರು ಶುಕ್ರವಾರ ಸುಪ್ರೀಂ ಕೋರ್ಟ್‌ನ ಸಭಾಂಗಣದಲ್ಲಿ ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಇಬ್ಬರೂ ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ, ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರ ಸಂಖ್ಯೆ 34 ಕ್ಕೆ ತಲುಪಿತು. ಆದಾಗ್ಯೂ, ಜೂನ್‌ನಲ್ಲಿ ನಿವೃತ್ತರಾಗಲಿರುವ ಮೂವರು ನ್ಯಾಯಾಧೀಶರ ಕೆಲಸದ ಕೊನೆ ದಿನವೂ ಶುಕ್ರವಾರವಾಗಿರುವುದರಿಂದ ಅಲ್ಪಾವಧಿಗೆ ಮಾತ್ರ ಸುಪ್ರೀಂ ಕೋರ್ಟ್ ಪೂರ್ಣ ಬಲವನ್ನು ಹೊಂದಿದಂತಾಯಿತು. ನ್ಯಾಯಮೂರ್ತಿ ಕೆ.ಎಂ ಜೋಸೆಫ್, ಅಜಯ್ ರಸ್ತೋಗಿ ಮತ್ತು ವಿ ರಾಮಸುಬ್ರಮಣಿಯನ್ ತಿಂಗಳು ಅಧಿಕಾರ ನಿವೃತ್ತರಾಗಲಿದ್ದಾರೆ.
ಜಲ್ಲಿಕಟ್ಟು, ಕಂಬಳಕ್ಕೆ ಅವಕಾಶ : ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ ಕಂಬಳ ಸಮಿತಿ
ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರು ಆಗಸ್ಟ್ 11, 2030 ರಂದು ನಿವೃತ್ತಿಯಾಗಲಿದ್ದಾರೆ. ನಂತರ ನ್ಯಾಯಮೂರ್ತಿ ವಿಶ್ವನಾಥನ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಅವರ ಅಧಿಕಾರವಧಿ 2031ರ ಮೇ 25ರ ವರೆಗೆ ಇರಲಿದೆ. ಮಿಶ್ರಾ ಮತ್ತು ವಿಶ್ವನಾಥನ್ ಅವರ ನೇಮಕಾತಿಯ ಪ್ರಕಟಣೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಚೇರಿಯಿಂದ ಗುರುವಾರ ಹೊರಡಿಸಲಾಗಿತ್ತು. ಈ ವಿಚಾರವನ್ನು ಹೊಸ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರೂ ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು.