Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಸುಬ್ರಮಣ್ಯ: ಕೆಎಸ್ ಆರ್ ಟಿಸಿ ಬಸ್ ಗೆ ದಂತದಿಂದ ತಿವಿದ ಕಾಡಾನೆ- ಪ್ರಯಾಣಿಕರು ಪಾರು

0

ಸುಬ್ರಹ್ಮಣ್ಯ: ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ ಗೆ ಕಾಡಾನೆಯೊಂದು ದಂತದಿಂದ ತಿವಿದು ದಾಳಿ ಮಾಡಿದ ಹಿನ್ನಲೆಯಲ್ಲಿ ಕೆಲಹೊತ್ತು ಆತಂಕ ಸೃಷ್ಟಿಯಾದ ಘಟನೆ ಸುಬ್ರಹ್ಮಣ್ಯ – ಗು೦ಡ್ಯ ರಾಜ್ಯ ಹೆದ್ದಾರಿಯ ಕೆ೦ಜಾಳ ಸಮೀಪದ ಅನಿಲ ಎಂಬಲ್ಲಿ ಜೂ.1 ರಂದು ರಾತ್ರಿ ನಡೆದಿದೆ.

ಸ್ಲೀಪರ್ ಕೋಚ್ ಬಸ್ ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯ ಮೂಲಕ ಬೆ೦ಗಳೂರಿಗೆ ತೆರಳುತ್ತಿದ್ದಾಗ ಕೆ೦ಜಾಳ ಸಮೀಪದ ಅನಿಲ ಎಂಬ ರಸ್ತೆಯಲ್ಲಿ ಕಾಡಾನೆ ನಿಂತಿದ್ದು, ಇದನ್ನು ನೋಡಿ ಕ೦ಡು ತಪ್ಪಿಸಲು ಯತ್ನಿಸಿದ್ದಾರೆ.

ಬೆಂಗಳೂರು: ಬಿಬಿಎಂಪಿ ಆಸ್ತಿ ತೆರಿಗೆ ರಿಯಾಯಿತಿ ಜೂನ್ ಅಂತ್ಯದವರೆಗೂ ವಿಸ್ತರಣೆ

ಈ ವೇಳೆ ಆನೆಯು ಬಸ್ಸಿನ ಎಡಭಾಗಕ್ಕೆ ದ೦ತದಿ೦ದ ಸೊಂಡಿಲಿನಿಂದ ತಿವಿದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಬಸ್ಸಿಗೆ ಹಾನಿಯಾಗಿದೆ. ಸ್ವಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ೦ದು ತಿಳಿದು ಬಂದಿದೆ. ಬಸ್ ನಸುಕಿನ ವೇಳೆ ಬಳಿಕ ಬೆಂಗಳೂರು ಕಡೆ ಪ್ರಯಾಣಿಸಿದೆ.

Leave A Reply

Your email address will not be published.