ಸುಬ್ರಹ್ಮಣ್ಯ: ಕಾಲೇಜು ಮುಗಿಸಿ ಮನೆಗೆ ನಡೆದುಕೊಂಡು ತೆರಳುವ ಸಂದರ್ಭ ಮುಖ್ಯ ರಸ್ತೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಏಕಾಏಕಿ ಕಾರೊಂದು ಹರಿದು ಮೂವರು ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಜೆ ವೇಳೆ ಕುಕ್ಕೆ ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಬಳಿಯ ವಲ್ಲೀಶಾ ಎದುರು ಸಂಭವಿಸಿದೆ.
ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಗಳಾದ ಸಿಂಚನಾ ವಿ.ಪಿ., ಬಿಂಬಿಕಾ, ಹನಿಷ್ಕಾ ಎಸ್.ಆರ್., ಶಾಲಿನಿ ಎಂ., ಜಷ್ಮಿತಾ, ಕೃತಿ ಅವರ ಮೇಲೆ ಕಾರು ಹರಿದು ಗಾಯಗಳಾಗಿವೆ. ಕಾಲೇಜು ತಿರುವಿನ ಸಮೀಪ ವಿದ್ಯಾರ್ಥಿಗಳು ಸುಬ್ರಹ್ಮಣ್ಯ ಪೇಟೆ ಕಡೆ ತೆರಳುತಿದ್ದಾಗ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಸಿಂಚನಾ ವಿ.ಪಿ. ಸುಳ್ಯ ಸರಕಾರಿ ಆಸ್ಪತ್ರೆ ಹಾಗೂ ಬಿಂಬಿಕಾ, ಹನಿಷ್ಕಾ ಎಸ್.ಆರ್. ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಪುತ್ತೂರು: 8 ತಿಂಗಳ ಹಿಂದೆ ಅಂಗಡಿಯಿಂದ ಲಕ್ಷಾಂತರ ರೂ. ನಗದು ಎಗರಿಸಿದ್ದ ಆರೋಪಿಗಳ ಸೆರೆ
ಶಾಲಿನಿ ಎಂ., ಜಷ್ಮಿತಾ, ಕೃತಿ ಅವರು ಸುಬ್ರಹ್ಮಣ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರನ್ನು ವಶಕ್ಕೆ ಪಡೆದುಕೊಂಡು ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿದ್ದೆ ಮಂಪರಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿದೆ ಎನ್ನಲಾಗಿದೆ.