Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ಸೌಜನ್ಯ ಕೇಸ್‌ನಲ್ಲಿ ನ್ಯಾಯ ಸಿಗಲಿ, ಆದ್ರೆ ವಿರೇಂದ್ರ ಹೆಗ್ಗಡೆ ವಿರುದ್ಧಅಪಪ್ರಚಾರ ಸಹಿಸಲ್ಲ-ಗುಣಧರನಂದಿ ಸ್ವಾಮೀಜಿ

0

ಹುಬ್ಬಳ್ಳಿ: ಸೌಜನ್ಯ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಬೇಕು. ಆದರೆ ಇಂತಹ ಪ್ರಕರಣದ ಹೆಸರಲ್ಲಿ ಸಮಾಜ ಸೇವಕರ ಮಾನಹಾನಿಯಾಗಬಾರದು ಎಂದು ವರೂರು ನವಗೃಹ ತೀರ್ಥ ಕ್ಷೇತ್ರದ ಜೈನ ಮುನಿ ಗುಣಧರನಂದಿ ಸ್ವಾಮೀಜಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಶಾಂತಿಯ ತೋಟ. ಆದರೆ ಇಂತಹ ರಾಜ್ಯದಲ್ಲಿ ಹಿಂಸಾ ಕೃತ್ಯ ನಡೆಯಬಾರದು. ಅಹಿಂಸಾ ತತ್ವದಿಂದ ನಮ್ಮ ದೇಶ ಸ್ವಾತಂತ್ರ್ಯಗೊಂಡಿದೆ. ಕಳೆದ ಕೆಲ ವರ್ಷಗಳ ಹಿಂದೆ ಒಂದು ದುರ್ಘಟನೆ ನಡದಿದೆ. ಸೌಜನ್ಯ ಕೊಲೆ ಪ್ರಕರಣ ನಮ್ಮ ಮನಸ್ಸಿಗೆ ಬಹಳ ನೋವಾಗಿದೆ. ಯಾರೂ ಕೊಲೆ ಮಾಡಬಾರದು. ಯಾರು ಮಾಡಿದ್ದಾರೆ, ಅವರಿಗೆ ಶಿಕ್ಷೆ ಆಗಬೇಕು ಆದರೆ ಇಂತಹ ಪ್ರಕರಣದ ಹೆಸರಲ್ಲಿ ಸಮಾಜ ಸೇವಕರ ಮಾನಹಾನಿಯಾಗಬಾರದು ಎಂದರು.

ಮಾತು ಮುಂದುವರಿಸಿದ ಗುಣಧರನಂದಿ ಸ್ವಾಮೀಜಿ ಒಳ್ಳೆಯ ಆಡಳಿತ ನೀಡಿದ ಸಿದ್ದರಾಮಯ್ಯ ಇದ್ದಾರೆ. ಅವರ ಮೇಲೆ ನಂಬಿಕೆ ಇದೆ. ಸೌಜನ್ಯಗೆ ನ್ಯಾಯ ಸಿಗಬೇಕು, ಆದರೆ ಮುಖವಾಡ ಹೊತ್ತು ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರ ಮಾಡಬಾರದು ಎಂದು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಎಲ್ಲ ಧರ್ಮದವರು ಹೋಗುತ್ತಾರೆ. ಅನ್ನ ದಾಸೋಹ ಮಾಡಿದ ಮಠದ ಬಗ್ಗೆ ಅಪಪ್ರಚಾರ ಸರಿ ಅಲ್ಲ. ಪದೇ ಪದೇ ಅಪಪ್ರಚಾರ ಮಾಡಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ದೇಹದ ನೋವಿಗಿಂತ ಮನಸಿಗೆ ಆಗುವ ನೋವು ಹೆಚ್ಚು ನೋವು ಕೊಡುತ್ತದೆ. ಆಧಾರ ರಹಿತವಾಗಿ ಟಾರ್ಗೆಟ್ ಮಾಡೋದು ಸರಿ ಅಲ್ಲ ಎಂದು ಹೇಳಿದರು.

ಪದೇ ಪದೇ ಟಾರ್ಗೆಟ್ ಮಾಡೋದು ಕೂಡಾ ಮಾನಸಿಕ ಹಿಂಸೆ. ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ, ಅಪಪ್ರಚಾರ ಆಗಬಾರದು. ಸುಮ್ಮನೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಗುಣಧರನಂದಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

Leave A Reply

Your email address will not be published.