Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಹನಿಮೂನ್ ಗೆಂದು ಇಂಡೊನೇಷ್ಯಾಕ್ಕೆ ತೆರಳಿದ್ದ ಭಾರತದ ವೈದ್ಯ ದಂಪತಿ ಸಮುದ್ರಪಾಲು!

0

ಬಾಲಿ (ಇಂಡೋನೇಷ್ಯಾ): ನೂರಾರು ಕನಸುಗಳನ್ನು ಹೊತ್ತು, ಸುಖವಾಗಿ ಜೀವನ ಸಾಗಿಸಬೇಕು ಎಂದುಕೊಂಡಿದ್ದ ವೈದ್ಯ ದಂಪತಿ ಮದುವೆಯಾಗಿ ಒಂದು ವಾರ ಕಳೆಯುವುದರ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಜೂನ್ 1 ರಂದು ಇಬ್ಬರೂ ಮದುವೆಯಾಗಿದ್ದು, ಹನಿಮೂನ್‌ಗಾಗಿ ಬಾಲಿಗೆ ತೆರಳಿದ್ದರು.

ಮದುವೆಯ ಹೊಸತರಲ್ಲಿ ಫೋಟೋಶೂಟ್ ತುಂಬಾ ಸಾಮಾನ್ಯ. ಬಹುಶಃ ಇದನ್ನು ಯೋಚಿಸಿ, ವೈದ್ಯ ದಂಪತಿ ಸ್ಪೀಡ್ ಬೋಟ್ ರೈಡ್ ಸಮಯದಲ್ಲಿ ಛಾಯಾಚಿತ್ರಗಳನ್ನು ಕ್ಲಿಕ್ ಮಾಡಲು ಸಮುದ್ರಕ್ಕೆ ತೆರಳಿದ್ದರು. ಆದರೆ, ಇದು ಅವರ ಕೊನೆಯ ಸವಾರಿ ಎಂದು ಅವರಿಗೆ ತಿಳಿದಿರಲಿಲ್ಲ. ಮಾಧ್ಯಮಗಳ ವರದಿಯ ಪ್ರಕಾರ, ಮೃತರು ವೈದ್ಯ ದಂಪತಿಯಾದ ಲೋಕೇಶ್ವರನ್ ಮತ್ತು ವಿಭೂಶಾನಿಯಾ ಎಂದು ಗುರುತಿಸಲಾಗಿದೆ.

ಇಂದಿನಿಂದ SSLC ಪೂರಕ ಪರೀಕ್ಷೆ ಆರಂಭ; ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮ

ಇತ್ತೀಚೆಗೆ ಜೂನ್ 1 ರಂದು ಪೂನಮಲ್ಲಿಯ ಮದುವೆ ಮಂಟಪದಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಫೋಟೋಶೂಟ್ ವೇಳೆ ನೀರಿನಲ್ಲಿ ಮುಳುಗಿ ದಂಪತಿ ಸಾವನ್ನಪ್ಪಿರುವ ಬಗ್ಗೆ ಇಬ್ಬರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರಿಗೆ ಇಬ್ಬರ ಸಾವಿನ ಮಾಹಿತಿ ತಿಳಿದು ಬಂದ ತಕ್ಷಣವೇ ಮದುವೆ ಮನೆಯಲ್ಲಿ ತುಂಬಿದ್ದ ಸಂತಸ ಕೆಲವೇ ಸೆಕೆಂಡುಗಳಲ್ಲಿ ಶೋಕವಾಗಿ ಮಾರ್ಪಟ್ಟಿತ್ತು. ಕೂಡಲೇ ಎರಡು ಕುಟುಂಬಗಳು ಬಾಲಿ ತಲುಪಿದವು. ಶುಕ್ರವಾರ ಲೋಕೇಶ್ವರನ್ ಮೃತದೇಹ ಹಾಗೂ ಶನಿವಾರ ಬೆಳಗ್ಗೆ ವಿಭೂಷಣಿಯ ಮೃತದೇಹ ಪತ್ತೆಯಾಗಿದೆ. ಇದೀಗ ಇಬ್ಬರ ಮೃತದೇಹಗಳನ್ನು ಭಾರತಕ್ಕೆ ತರಲು ಸಿದ್ಧತೆ ನಡೆಸಲಾಗಿದೆ.

Leave A Reply

Your email address will not be published.