ರಾಜ್ಯದಲ್ಲಿ ಕಳೆದ 15 ದಿನಗಳಿಂದ ಮಳೆರಾಯ ಕಾಣೆಯಾಗಿದ್ದಾನೆ. ಎಲ್ಲೆಲ್ಲೂ ಬೇಸಿಗೆಯಂತೆ ಬಿಸಿಲು ಕಾಯುತ್ತಿದೆ. ನದಿ, ತೊರೆಯ ನೀರು ಬತ್ತಲು ಆರಂಭಿಸಿದೆ. ಇದಕ್ಕೆ ಕರಾವಳಿಯೂ ಹೊರತಾಗಿಲ್ಲ. ಜೂನ್ ತಿಂಗಳ ಅಂತ್ಯದ ಜುಲೈ ತಿಂಗಳಲ್ಲಿ ಕರಾವಳಿ ಭಾಗದಲ್ಲಿ ಮಳೆರಾಯನ ಅರ್ಭಟ ಜೋರಾಗಿತ್ತು.
ಕರಾವಳಿ ಕರ್ನಾಟಕದ ಭಾಗವಾದ ಕಾಸರಗೋಡಿನಿಂದ ಕಾರವಾರದವರೆಗಿನ ಪ್ರದೇಶಗಳಲ್ಲಿ ಮಂಗಳವಾರವೂ ಮಳೆಗೆ ರಜೆ. ಶನಿವಾರದಿಂದಲೇ ಇಲ್ಲಿಗೆ ಪ್ರವಾಸಿಗರು ಮುಗಿಬಿದ್ದಿದ್ದು, ಭಾನುವಾರ ರಜಾ ದಿನ ಹಾಗೂ ಸೋಮವಾರವೂ ರಜೆ ಹಾಕಿ ಪ್ರವಾಸಿಗರು ತಿರುಗಾಟ ನಡೆಸಿದ ಹಿನ್ನೆಲೆಯಲ್ಲಿ ತೀರ್ಥಕ್ಷೇತ್ರಗಳಲ್ಲಿ ಜನಸಂದಣಿ ಇತ್ತು. ಆದರೆ ಬಿಸಿಲಿನ ಝಳಕ್ಕೆ ಬಸವಳಿದರು.