ಬೆಂಗಳೂರು : ಮಳೆಯಿಂದಾಗಿ ಹಸಿರು ಮೇವಿನ ಸಮಸ್ಯೆ ಕಡಿಮೆಯಾಗಿದ್ದು, ಹಾಲಿನ ಉತ್ಪಾದನೆ ಹೆಚ್ಚಳಗೊಂಡ ಹಿನ್ನೆಲೆ ಹಾಲಿನ ಪ್ರೋತ್ಸಾಹ ಧನ ಲೀಟರ್ಗೆ 1.50 ರೂ. ದಷ್ಟು ಕಡಿತಗೊಳಿಸಲಾಗಿದೆ ಎಂದು ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ BAMUL ಆದೇಶ ಹೊರಡಿಸಿದೆ.
ಬೇಸಿಗೆಯಲ್ಲಿ ಹಸಿರು ಮೇವಿನ ಕಡಿಮೆಯಾಗಿರೋದ್ರಿಂದ ಜಿಲ್ಲಾ ಹಾಲು ಒಕ್ಕೂಟ ಬೇಸಿಗೆ ಸಮಯದಲ್ಲಿ ಪ್ರತಿ ಲೀಟರ್ ಹಾಲಿಗೆ 2.85 ರೂ. ವಿಶೇಷ ಪ್ರೋತ್ಸಾಹ ಧನ ಘೋಷಿಸಿತ್ತು. ಏ. 1ರಿಂದ ಮೇ. 31 ರವರೆಗೆ ಪ್ರತಿ ಲೀಟರ್ ಹಾಲಿಗೆ 2.85 ರೂ. ವಿಶೇಷ ಪ್ರೋತ್ಸಾಹ ಧನ ನಿಗದಿಯಾಗಿತ್ತು ಎಂದು ತಿಳಿಯಲಾಗಿದೆ. ಇದೀಗ ಮಳೆಯಿಂದಾಗಿ ಎಲ್ಲೆಡೆ ಹೆಚ್ಚಾಗಿನ ಹಸಿರು ಮೇವು ಲಭ್ಯವಾಗುತ್ತಿದ್ದು, ಹಿಂದೆ ನಿಗದಿಯಾಗಿದ್ದ ಪ್ರೋತ್ಸಾಹ ಧನವನ್ನು ಕಡಿತ ಮಾಡಲಾಗಿದೆ