ಬೀಜಿಂಗ್: ಮೀನುಗಾರಿಕೆಗೆಂದು ಹಿಂದೂ ಮಹಾಸಾಗರಕ್ಕೆ(Indian ocean) ತೆರಳಿದ್ದ ಚೀನಾದ ದೋಣಿ, ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಮುಳುಗಡೆಯಾಗಿದ್ದು, ಅದರಲ್ಲಿದ್ದ 39 ಜನರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
BREAKING NEWS: ಸಿದ್ದು ಸಿಎಂ ಫಿಕ್ಸ್.. ಹೈಕಮಾಂಡ್ ನಿಂದ ಅಧಿಕೃತ ಘೋಷಣೆಯೊಂದೇ ಬಾಕಿ
ದೋಣಿಯಲ್ಲಿ ಚೀನಾದ 17 ಪ್ರಜೆಗಳು, ಇಂಡೋನೇಷ್ಯಾದ 17 ಜನ ಹಾಗೂ ಫಿಲಿಪೈನ್ಸ್‌ನ ಐವರು ಇದ್ದರು ಎಂದು ಚೀನಾ ಸೆಂಟ್ರಲ್ ಟೆಲಿವಿಷನ್ (CCTV) ತಿಳಿಸಿದೆ. ಇದೀಗ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಹಾಗೂ ಪ್ರಧಾನಿ ಲಿ ಕಿಯಾಂಗ್ (Li Qiang)ವಿದೇಶಗಳಲ್ಲಿರುವ ಚೀನಾದ ರಾಜತಾಂತ್ರಿಕರಿಗೆ ಹಾಗೂ ಕೃಷಿ ಮತ್ತು ಸಾರಿಗೆ ಸಚಿವಾಲಯಗಳಿಗೆ ಬದುಕುಳಿದವರನ್ನು ಹುಡುಕಲು ಹಾಗೂ ರಕ್ಷಿಸಲು ಆದೇಶಿಸಿದ್ದಾರೆ.