ಶಿವಮೊಗ್ಗ : ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಫೋಟವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿ ಅಯೋಮಯವಾಗಿದೆ. ಗುಡ್ಡಗಳು ಕುಸಿದಿವೆ. ಹೀಗಾಗಿ ಅಲ್ಲಿನ ರಸ್ತೆಗಳು ಕೂಡ ಬಂದ್ ಆಗಿವೆ. ಕೇದಾರನಾಥನ ದರ್ಶನಕ್ಕೆ ತೆರಳಿದ್ದ ಶಿವಮೊಗ್ಗದ ನಾಲ್ವರು ಅಲ್ಲಿ ಸಿಲುಕಿಕೊಂಡಿದ್ದಾರೆ. ಭದ್ರಾವತಿಯ ಹುತ್ತಾ ಕಾಲೋನಿ ನಿವಾಸಿಗಳಾಗಿರುವ ದಂಪತಿ ಅಲ್ಲಿ ಸಿಲುಕಿಕೊಂಡಿದ್ದಾರೆ. ಕೇದಾರನಾಥಕ್ಕೆ ತೆರಳಿದ್ದ ವೀರಣ್ಣ ದಂಪತಿ ಹಾಗೂ ಅವರ ಸೋದರ ಸಂಬಂಧಿ, ಸದ್ಯ ಕೇದಾರನಾಥದಿಂದ ಕೇವಲ 22 ಕಿ.ಮೀ. ದೂರವಿರುವ ಸೀತಾಪುರದಲ್ಲಿ ಸಿಲುಕಿಕೊಂಡಿದ್ದಾರೆ. ವೀರಣ್ಣ (74), ಪತ್ನಿ ಸುಶೀಲಮ್ಮ (63), ಭರ್ಮಪ್ಪ (70), ಪತ್ನಿ ಮಹಾಲಕ್ಷ್ಮಿ (60) ಸದ್ಯ ಸೀತಾಪುರದಲ್ಲಿ ಆಶ್ರಯ ಪಡೆದಿರುವ ದಂಪತಿಯಾಗಿದ್ದಾರೆ. ಕಳೆದ ಆಗಸ್ಟ್ 2 ರಂದು ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದ ಈ ಕುಟುಂಬ, ಕಳೆದೆರೆಡು ದಿನಗಳ ಹಿಂದೆ ಕೇದಾರನಾಥನ ದರ್ಶನ ಪಡೆಯಬೇಕಿತ್ತು. ಆದರೆ, ದರ್ಶನ ಸಾಧ್ಯವಾಗದೇ ಶಿಬಿರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಹಲವಾರು ಗುಡ್ಡಗಳ ಕುಸಿತದಿಂದಾಗಿ ಮುಂದೆಯೂ ಹೋಗಲಾಗದೇ, ವಾಪಸ್ ಬರಲಾಗದೇ ಸಂಧಿಗ್ದ ಪರಿಸ್ಥಿತಿಯಲ್ಲಿ ಈ ಕುಟುಂಬವಿದೆ. ಕೇದಾರನಾಥ ದರ್ಶನ ಪಡೆಯದೇ ವಾಪಾಸ್ ಬರಲು ನಿರ್ಧಾರ ಮಾಡಿದ್ದು, ಸ್ಥಳಿಯ ಆಡಳಿತದ ನಿರ್ಧಾರಕ್ಕೆ ಇದೀಗ ಈ ಕುಟುಂಬ ಕಾಯುತ್ತಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ.
[vc_row][vc_column]
BREAKING NEWS
- ಚಿಕ್ಕಮಗಳೂರು: ಹೆಲ್ಮೆಟ್ ವಿಚಾರಕ್ಕೆ ಯುವ ವಕೀಲನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ ಪೊಲೀಸರು
- ಶಾಲೆಗಳಿಗೆ ಬಾಂಬ್ ಬೆದರಿಕೆ : ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ – ಖಾರಿಜೈಟ್ಸ್ ಹೆಸರಲ್ಲಿ ಇ-ಮೇಲ್
- ಮಲಯಾಳಂನ ಖ್ಯಾತ ನಟಿ ಆರ್.ಸುಬ್ಬಲಕ್ಷ್ಮಿ ನಿಧನ
- ಎಚ್ಐವಿ ಸೋಂಕಿತ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿ ಕರ್ನಾಟಕ
- ಹತ್ತೇ ನಿಮಿಷದಲ್ಲಿ ಬ್ಯಾಂಕ್ ನಿಂದ 18.85 ಕೋಟಿ ರೂ. ದರೋಡೆ.!
- ಬೆಂಗಳೂರಿನ 7ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ
- ಗ್ರಾಹಕರಿಗೆ ಶಾಕ್ : ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ
- ವಿಶ್ವ ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದುಬೈಗೆ ತೆರೆಳಿದ ಮೋದಿ – ಅದ್ದೂರಿ ಸ್ವಾಗತ
- ಶಾಲಾ ಶಿಕ್ಷಕಿ ಕಿಡ್ನಾಪ್ ಪ್ರಕರಣ ಸುಖಾಂತ್ಯ: ಅಪಹರಣಕಾರರ ಬಂಧನ
- ಭ್ರೂಣ ಹತ್ಯೆ ಪ್ರಕರಣ- ಸಿಐಡಿ ತನಿಖೆಗೆ ಒಪ್ಪಿಸಿದ ಸಿಎಂ