Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಹುಬ್ಬಳಿ-ಧಾರವಾಡಕ್ಕೆ ನೂತನ ಕಮಿಷನರ್ ನೇಮಕ; ರಾಜ್ಯದ ಮೊದಲ ಮಹಿಳಾ ಪೊಲೀಸ್ ಕಮಿಷನರ್

0

ಹುಬ್ಬಳ್ಳಿ:ಹುಬ್ಬಳ್ಳಿ ಧಾರವಾಡ ನೂತನ ಪೋಲಿಸ್ ಕಮೀಷನರ್ ಆಗಿ ಹಿರಿಯ ಐಪಿಎಸ್ ಅಧಿಕಾರಿ ರೇಣುಕಾ ಸುಕುಮಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಇವರು ರಾಜ್ಯದ ಮೊದಲ ಮಹಿಳಾ ಪೋಲಿಸ್ ಕಮೀಷನರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸಂತೋಷ ಬಾಬು ಅವರಿಂದ ತೆರವಾದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಸ್ಥಾನಕ್ಕೆ ರೇಣುಕಾ ಅವರನ್ನು ನೇಮಕ‌ ಮಾಡಲಾಗಿದೆ.

ಈ ಹಿಂದೆ ಹುಬ್ಬಳ್ಳಿ ಧಾರವಾಡ ಕಮಿಷನರೇಟ್ ನಲ್ಲಿ ಡಿಸಿಪಿಯಾಗಿ ರೇಣುಕಾ ಕೆಲಸ ಮಾಡಿದ್ದರು.

ಅಧಿಕಾರ ವಹಿಸಿಕೊಂಡ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು,ಅವಳಿ ನಗರದ ಕಮೀಷನರ್ ಆಗಿ ಬಂದಿರೋದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.ಇದಲ್ಲದೆ ಮಹಿಳಾ ಸುರಕ್ಷತೆಗೆ ಮೊದಲ ಆದ್ಯತೆ ಮತ್ತು ರೌಡಿಗಳ ಹಾವಳಿ ಮಟ್ಟಹಾಕುವ ಭರವಸೆ‌ ನೀಡಿದ್ದಾರೆ.

ಪೊಲೀಸ್ ಇಲಾಖೆ ದೊಡ್ಡ ಜವಾಬ್ದಾರಿ ಕೊಟ್ಟಿದೆ.ಹಿಂದೆ ಇಲ್ಲಿಯೇ ಡಿಸಿಪಿ ಆಗಿ ಕಾರ್ಯ ನಿರ್ವಹಿಸಿದ್ದೇನೆ.ಈಗ ಪೊಲೀಸ್ ಕಮೀಷನರ್ ಆಗಿ ಬಂದಿದ್ದೇನೆ ತುಂಬಾ ಖುಷಿಯಾಗಿದೆ.ಸರ್ಕಾರ ನಿಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಬಾಯಿಸುತ್ತೇನೆ ಎಂದು ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕಾರ ಮಾಡಿದ ರೇಣುಕಾ ಸುಕುಮಾರ ಹೇಳಿದರು.

Leave A Reply

Your email address will not be published.