ಉಡುಪಿ: ಸಿಎಂ ಬೊಮ್ಮಾಯಿ ಅಪಾಯದಿಂದ ಪಾರಾಗಿದ್ದಾರೆ. ಉಡುಪಿ ಜಿಲ್ಲೆಯ ಅರೆಶಿರೂರು ಗ್ರಾಮದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಹೆಲಿಕ್ಯಾಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಹೆಲಿಕಾಪ್ಟರ್ ಫ್ಯಾನ್ ಗಾಳಿಗೆ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಸಿಎಂ ಎಸ್ಕಾರ್ಟ್ ಬಳಿ ಹೋದ ತಕ್ಷಣ ಹೆಲಿಪ್ಯಾಡ್ ಹೊತ್ತಿ ಉರಿದಿದೆ.
ಹೆಲಿಪ್ಯಾಡ್ ಸುತ್ತಮುತ್ತ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿನಂದಿಸುತ್ತಿದ್ದಾರೆ.