Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಹೆಸ್ಕಾಂನಲ್ಲಿ 248 ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ….!

0

ಹೆಸ್ಕಾಂನಲ್ಲಿ ಒಂದು ವರ್ಷದ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ, ನೇಮಕಾತಿ ಸೇರಿದಂತೆ ಇನ್ನಿತರ ವಿವರಗಳು ಇಲ್ಲಿವೆ.

ಹುಬ್ಬಳ್ಳಿ ವಿದ್ಯುತ್​​ ಸರಬರಾಜು ಕಂಪನಿ ನಿಯಮಿತದಿಂದ ಪ್ರಸಕ್ತ ಸಾಲಿನ ವೃತ್ತಿ ತರಬೇತಿಗಾಗಿ 248 ಐಟಿಐ ಅಪ್ರೆಂಟಿಸ್​ಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹೆಸ್ಕಾಂನಲ್ಲಿ ಕಾರ್ಯ ನಿರ್ವಹಣೆ ಅನುಭವವನ್ನು ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವರ್ಷದ ಅವಧಿಗೆ ಈ ಹುದ್ದೆಗಳ ನೇಮಕಾತಿ ನಡೆಸಲಾಗುತ್ತಿದ್ದು, ಈ ವೇಳೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಶಿಷ್ಯವೇತನವನ್ನು ನೀಡಲಾಗುವುದು.

ಹುದ್ದೆ ವಿವರ: ಹೆಸ್ಕಾಂನಲ್ಲಿ ಐಟಿಐ ಎಲೆಕ್ಟ್ರಿಶಿಯನ್​ ಅಪ್ರೆಂಟಿಸ್​​ಗಳ ನೇಮಕಾತಿ

ವಿದ್ಯಾರ್ಹತೆ: ಅಭ್ಯರ್ಥಿಗಳು ಎರಡು ವರ್ಷದ ಐಟಿಐ (ಎಲೆಕ್ಟ್ರಿಶಿಯನ್​) ಅಭ್ಯಾಸ ಮಾಡಿದ್ದು, ಎಸಿವಿಟಿ, ಎಸ್​ಸಿವಿಟಿ- ಪ್ರಾವಿಷನಲ್​ ನ್ಯಾಷನಲ್​ ಟ್ರೇಡ್​ ಸರ್ಟಿಫಿಕೇಟ್​​ ಅಂಕ ಪಟ್ಟಿ ಹೊಂದಿರಬೇಕು.

ಈ ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಬ್ಬರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 25 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಆಯ್ಕೆ ವೇತನ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್​ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಒಂದು ವರ್ಷದ ಅಪ್ರೆಂಟಿಸ್​​ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ 7 ಸಾವಿರ ರೂ. ನೀಡಲಾಗುವುದು.

ಅರ್ಜಿ ಶುಲ್ಕ: ಅಭ್ಯರ್ಥಿಗಳು ಪೋಸ್ಟಲ್​ ಆರ್ಡರ್​ ಮೂಲಕ ಅರ್ಜಿ ಶುಲ್ಕ ಭರಿಸಬೇಕಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 50 ರೂ. ಸಾಮಾನ್ಯ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಈಗಾಗಲೇ ಕೇಂದ್ರ ಸರ್ಕಾರದ ಅಪ್ರೆಂಟಿಸ್​ ಪೋರ್ಟಲ್​ನಲ್ಲಿ ನೋಂದಾಯಿಸಿರಬೇಕು. ನಂತರ ಹುಬ್ಬಳಿ ವಿದ್ಯುತ್​ ಪೂರೈಕೆ ಕಂಪನಿ ನಿಯಮಿತಿವನ್ನು ಆಯ್ಕೆ ಮಾಡಬೇಕು. ಅಪ್ರೆಂಟಿಸ್​​ ಶಿಪ್​ ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಂಡ ಅರ್ಜಿ ಪ್ರತಿ ಜೊತೆಗೆ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ ಜೊತೆಗೆ ವಿದ್ಯಾರ್ಹತೆ ಮತ್ತು ಸರ್ಕಾರ ಆಸ್ಪತ್ರೆ ವೈದ್ಯರಿಂದ ದೃಢೀಕರಿಸಿದ ದೈಹಿಕ ಸಾಮರ್ಥ್ಯದ ಪ್ರಮಾಣ ಪತ್ರವನ್ನು ಈ ಕೆಳಕಂಡ ವಿಳಾಸಕ್ಕೆ ನಿಗದಿತ ದಿನಾಂಕಕ್ಕೆ ಮುನ್ನ ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ: ಕಾರ್ಯನಿರ್ವಾಹಕ ಅಭಿಯಂತರರು (ವಿ), ಕೈಗಾರಿಕಾ ತರಬೇತಿ ಕೇಂದ್ರ, (ಐಟಿಸಿ), ಹುಬ್ಬಳ್ಳಿ ವಿದ್ಯುತ್​ ಸರಬರಾಜು ಕಂಪನಿ ನಿಯಮಿತ, ವಿದ್ಯುತ್​ ನಗರ, ಕಾರವಾರ ರಸ್ತೆ, ಹುಬ್ಬಳ್ಳಿ- 580024.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 9 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು hescom.karnataka.gov.in ಭೇಟಿ ನೀಡಬಹುದು. ಅರ್ಜಿ ಸಲ್ಲಿಕೆ ಸಂಬಂದ ಹೆಚ್ಚಿನ ಮಾಹಿತಿಗೆ 0836-2956611 ಸಹಾಯವಾಣಿಗೆ ಕರೆ ಮಾಡಬಹುದಾಗಿದೆ.

Leave A Reply

Your email address will not be published.