ಮಂಡ್ಯ: ನಾಲೆಯಲ್ಲಿ ಬಟ್ಟೆ ಒಗೆಯಲು ಬಂದಿದ್ದ 7 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಮೂವರನ್ನು ಸ್ಥಳೀಯರು ಕಾಲುವೆಯಿಂದ ರಕ್ಷಿಸಿದ್ದಾರೆ. ಉಳಿದ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಾದೇವಪುರ ಬೋರೆ ಗ್ರಾಮದ ಬಳಿಯ ರಾಮ ಸ್ವಾಮಿ ಘಟನೆ ನಡೆದಿದೆ.
ಮೈಸೂರಿನ ಉದಯಗಿರಿ ಹಜಿರ ನಿಶ್ವಾನ್ ಅರೇಬಿಕ್ ಶಾಲೆಯ ವಿದ್ಯಾರ್ಥಿಗಳು ನಾಲೆಗೆ ಬಟ್ಟೆ ಒಗೆಯಲು ಮತ್ತು ಪಾತ್ರೆ ತೊಳೆಯಲು ಬಂದಿದ್ದ ವೇಳೆ ಘಟನೆ ಸಂಭವಿಸಿದೆ. ಒಬ್ಬ ಹುಡುಗ ನೀರಿನಲ್ಲಿ ಮುಳುಗಿ ಕೊಚ್ಚಿ ಹೋಗಿದ್ದಾನೆ ಈ ವೇಳೆ ಆತನನ್ನು ರಕ್ಷಿಸಲು ಪ್ರಯತ್ನಿಸಿ ಆರು ವಿದ್ಯಾರ್ಥಿಗಳು ನಾಲೆಗೆ ಇಳಿದು, ಕೊಚ್ಚಿಕೊಂಡು ಹೋಗಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಮೂವರನ್ನು ರಕ್ಷಿಸಿದ್ದಾರೆ






























