ದೆಹಲಿ: ಮಹಿಳೆಯರನ್ನು ಬೆಂಬಲಿಸಲು ಕೇಂದ್ರ ಸರ್ಕಾರವು ವಿಶೇಷ ಟೋಲ್-ಫ್ರೀ ಸಂಖ್ಯೆ ‘181’ ಸಹಾಯವಾಣಿ ಆರಂಭಿಸಿದೆ.
ಮಹಿಳೆಯರು ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಸಹಾಯದ ಅಗತ್ಯವಿದ್ದರೆ ಈ ಸಂಖ್ಯೆಗೆ ಕರೆ ಮಾಡಬಹುದು. ಮಹಿಳೆಯರು ಮತ್ತು ಮಕ್ಕಳು ಯಾವುದೇ ರೀತಿಯ ಹಿಂಸಾಚಾರವನ್ನು ಎದುರಿಸುತ್ತಿದ್ದರೆ ದಿನದ 24 ಗಂಟೆಯೂ (24×7) ಲಭ್ಯವಿರುವ ಈ ಸಂಖ್ಯೆಗೆ ಕರೆ ಮಾಡಬಹುದು.
ಈ ಎಲ್ಲಾ ಕರೆಗಳನ್ನು ಗೌಪ್ಯವಾಗಿಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
































