ಕಠ್ಮಂಡು: ಹೌದು ಕಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಸ್ಥಾನದಲ್ಲಿ10 ಕೆಜಿ ಚಿನ್ನ ಕಳವಾಗಿದೆ! ಶಿವಲಿಂಗದ ಮೇಲಿನ 100 ಕೆ.ಜಿ. ತೂಕದ ಚಿನ್ನದ ಆಭರಣದಲ್ಲಿ 10 ಕೆ.ಜಿ. ಚಿನ್ನ ನಾಪತ್ತೆಯಾಗಿದೆ. ಈ ಸಂಬಂಧ ನೇಪಾಳದ ತನಿಖಾ ಸಂಸ್ಥೆ ತನಿಖೆ ಆರಂಭಿಸಿದ್ದು ದೇವಸ್ಥಾನ ತಾತ್ಕಾಲಿಕ ಬಂದ್ ಆಗಿರಲಿದೆ
ಕಳೆದ ವರ್ಷ ಮಹಾಶಿವರಾತ್ರಿ ಉತ್ಸವದ ಸಂದರ್ಭದಲ್ಲಿ ದೇಗುಲದ ಗರ್ಭಗುಡಿಯ ಶಿವಲಿಂಗದ ಸುತ್ತ 103 ಕೆಜಿ ಚಿನ್ನದ ಜಲಹರಿ ನಿರ್ಮಾಣ ಮಾಡಲಾಗಿತ್ತು. ಆದ್ರೆ ಈ 100 ಕೆಜಿ ಚಿನ್ನದ ಪೈಕಿ 10 ಕೆಜಿ ಚಿನ್ನ ನಾಪತ್ತೆಯಾಗಿದೆ.
ಹೀಗಾಗಿ ನೇಪಾಳದ ಭ್ರಷ್ಟಾಚಾರ ವಿರೋಧಿ ಸಂಸ್ಥೆಯು ದೇವಾಲಯವನ್ನು ತನಿಖೆಗಾಗಿ ವಶಕ್ಕೆ ಪಡೆದಿದೆ. ದೇವರ ಚಿನ್ನದ ಆಭರಣವು ಕಾಣೆಯಾದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆದ ಬಳಿಕ ಸರ್ಕಾರವು ತನಿಖೆಗೆ ನಿರ್ದೇಶನ ನೀಡಿದೆಯಂತೆ.!