ದೆಹಲಿ: ಸೇನೆಗೆ ಸೇರಲು ಬಯಸುವ ಯುವಕರಿಗೆ ಇದೊಂದು ಉತ್ತಮ ಅವಕಾಶ. ಭಾರತೀಯ ಸೇನೆಯು ಕುಕ್, ಕಾರ್ ಪೇಂಟರ್, ಟೈಲರ್, ವಾಷರ್ಮನ್, ಕಾರ್ಪೆಂಟರ್ ಸೇರಿ 25 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತೇರ್ಗಡೆ ಹೊಂದಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏ.30 ಆಗಿದೆ.
ಅಭ್ಯರ್ಥಿಯು ಅಧಿಕೃತ ವೆಬ್‌ಸೈಟ್ www.indianarmy.nic.inಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಅಭ್ಯರ್ಥಿಯ ವಯೋಮಿತಿ 18ರಿಂದ 25 ವರ್ಷದೊಳಗಿರಬೇಕು.