ದೆಹಲಿ: ದೇಶದೆಲ್ಲೆಡೆ 157 ಹೊಸ ನರ್ಸಿಂಗ್ ಕಾಲೇಜು ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಕರ್ನಾಟಕದಲ್ಲಿ 4 ಹೊಸ ಕಾಲೇಜುಗಳು ನಿರ್ಮಾಣವಾಗಲಿವೆ. 1,570 ಕೋಟಿ ವೆಚ್ಚದಲ್ಲಿ ಈಗಿರುವ ನರ್ಸಿಂಗ್ ಕಾಲೇಜುಗಳ ಜೊತೆಗೆ ಇದನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಹೇಳಿದೆ.
ಮುಂದಿನ 5 ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದ ವ್ಯಾಪ್ತಿ 90,000 ಕೋಟಿಯಿಂದ 4.10 ಲಕ್ಷ ಕೋಟಿ ರೂಪಾಯಿಗೆ ವಿಸ್ತರಣೆ ಹೊಂದಲಿದೆ ಎಂದು ಈ ವೇಳೆ ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವಿಯಾ ಹೇಳಿದರು.