ಚಿತ್ರದುರ್ಗ: ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆದೇಹಳ್ಳಿ ಅಂಡರ್ ಪಾಸ್ ಹಾಗೂ ಚಿತ್ರದುರ್ಗ ನಗರ ಪೊಲೀಸ್ ಠಾಣೆ ಬಳಿ ದಾಖಲೆ ಇಲ್ಲದ ರೂ.20,17,160 ನಗದು ವಶಪಡಿಸಿಕೊಳ್ಳಲಾಗಿದೆ.
ಸಂಚಾರಿ ತನಿಖಾ ತಂಡಗಳು 5 ಪ್ರತ್ಯೇಕ ಪ್ರಕರಣಗಳಲ್ಲಿ ನಗದು ಜಪ್ತಿ ಮಾಡಿದ್ದಾರೆ. ಅಬಕಾರಿ ಇಲಾಖೆಯಿಂದ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಾಗಾಟ ಪಕ್ರರಣಗಳಲ್ಲಿ ರೂ.19,99,232 ಮೌಲ್ಯದ 10,853 ಲೀಟರ್ ಮದ್ಯ ವಶಪಡಿಕೊಳ್ಳಾಗಿದೆ.
ಜಿ.ಆರ್.ಹಳ್ಳಿಯ ಕರ್ನಾಟಕ ರಾಜ್ಯ ಪಾನಿಯ ನಿಗಮ ನಿಯಮಿತ (ಕೆ.ಎಸ್.ಬಿ.ಸಿ.ಎಲ್) ಗೋದಾಮಿಗೆ ಬಾರ್ ಕೋಡ್ ಇಲ್ಲದೆ ಸಾಗಟ ಮಾಡುತ್ತಿದ್ದ ರೂ.19,24,730 ಮೌಲ್ಯದ 10,650 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಜಪ್ತಿ ಮಾಡ್ಡಿದ್ದಾರೆ.
ಇದರ ಜೊತೆಗೆ ಹೊಳಲ್ಕರೆ ಪಟ್ಟಣ, ಚಿತ್ರದುರ್ಗ ಸಿಬಾರ್ ಕ್ರಾಸ್, ಚಳ್ಳಕೆರೆ ಹಾಗೂ ಮೊಳಕಾಲ್ಮೂರಿನ ಹಾನಗಲ್ ಬಳಿ ರೂ.74,502 ಮೌಲ್ಯದ ಸುಮಾರು 86.45 ಲೀಟರ್ ಮದ್ಯ ವಶಪಡಿಕೊಳ್ಳಲಾಗಿದೆ.