ದಾವಣಗೆರೆ: ತಾಲೂಕಿನ ಚಿಕ್ಕಬೂದಿಹಾಳ್ ಗ್ರಾಮದ ಬಳಿ ಇರುವ ಅಕ್ಕಿ ಗಿರಣಿಯ ಗೋದಾಮೊಂದರಲ್ಲಿ ಇರಿಸಿದ್ದ 20 ಲಕ್ಷ ಮೌಲ್ಯದ 2,067 ಕುಕ್ಕರ್ಗಳನ್ನು ಚುನಾವಣಾಧಿಕಾರಿಗಳು ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.!
ಗೋದಾಮಿನಲ್ಲಿ ಪರಿಶೀಲನೆ ನಡೆಸಿದಾಗ ಒಟ್ಟು 124 ಪೆಟ್ಟಿಗೆಗಳಲ್ಲಿದ್ದ ಕುಕ್ಕರ್ಗಳು ಪತ್ತೆಯಾಗಿವೆ. ಪೆಟ್ಟಿಗೆಗಳ ಮೇಲೆ ಯಾವುದೇ ಪಕ್ಷದ ಲೇಬಲ್ ಅಂಟಿಸಲಾಗಿಲ್ಲ. ಯಾರಿಗೆ ಸೇರಿದ್ದು ಎಂಬುದು ಖಚಿತವಾಗಿಲ್ಲ.
ಅಕ್ಕಿ ಗಿರಣಿ ಮಾಲೀಕ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ವಿರುದ್ಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗುತ್ತಿದೆ. ಎಂದು ದಾವಣಗೆರೆ ಉತ್ತರ ಚುನಾವಣಾಧಿಕಾರಿ ಕೆ.ಆರ್. ಶ್ರೀನಿವಾಸ್ ತಿಳಿಸಿದ್ದಾರೆ.