ರಾಜ್ಯದ 224 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಇದೀಗ ಪ್ರಾರಂಭವಾಗಿದೆ. ಬೆಂಗಳೂರು ಸೇರಿದಂತೆ 34 ಸ್ಥಳಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಅಧಿಕಾರಿಗಳು, ಪಕ್ಷದ ಏಜೆಂಟರುಗಳ ಸಮ್ಮುಖದಲ್ಲಿ ಭದ್ರತಾ ಅಧಿಕಾರಿಗಳು ರೂಂ ಓಪನ್ ಮಾಡಿದ್ದಾರೆ.
ಪ್ರಥಮವಾಗಿ, ಸೇವಾ ಮತಗಳು, ಬ್ಯಾಲೆಟ್ ವೋಟ್ಸ್ ಎಣಿಕೆ ನಡೆಯಲಿದೆ. ಆ ಬಳಿಕ ಇವಿಎಂಗಳನ್ನು ಮತ ಎಣಿಕಾ ಟೇಬಲ್‌ಗಳಿಗೆ ತಂದು ಎಣಿಕಾ ಕಾರ್ಯವನ್ನು ಆರಂಭಿಸಲಾಗುವುದು.