ಬೆಂಗಳೂರು : ನಮ್ಮ ಯೋಜನೆಗಳಿಗೆ ಸುಮಾರು 50 ಸಾವಿರ ಕೋಟಿ ಆಗಬಹುದು ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಕೇಂದ್ರದಿಂದ ಈ ವರ್ಷ 50 ಸಾವಿರ ಕೋಟಿ ರೂ. ಬರುತ್ತದೆ. ಕರ್ನಾಟಕದಿಂದ 4 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತೇವೆ. ಆದರೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮಗೆ ಅನ್ಯಾಯವಾಗಿದೆ ಎಂದರು. ನ್ಯಾಯಯುತವಾಗಿ ಕರ್ನಾಟಕಕ್ಕೆ ಸಿಗಬೇಕಿದ್ದ 5495 ಕೋಟಿ ರೂ.ವನ್ನು ಬಿಜೆಪಿ ರಾಜ್ಯ ಸರ್ಕಾರ ಕೇಳಿಲ್ಲ. ರಾಜ್ಯದ ಸಂಸದರು ಕೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು. ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಈ ದೇಶದ ಸಾಲ 53 ಲಕ್ಷದ 11 ಸಾವಿರ ಕೋಟಿ ಇತ್ತು. ಮೋದಿ ಅಧಿಕಾರಕ್ಕೆ ಬಂದ ನಂತರ 9 ವರ್ಷಗಳಲ್ಲಿ ದೇಶದ ಮೇಲೆ 155 ಲಕ್ಷ ಕೋಟಿ ಆಗಿದೆ. ಬೊಮ್ಮಾಯಿ ಯಡಿಯೂರಪ್ಪ ಸರ್ಕಾರದಲ್ಲಿ 4 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ನಾನು ಐದು ವರ್ಷಗಳ ಕಾಲ ಸರ್ಕಾರ ನಡೆಸಿದಾಗಲೂ ಇಷ್ಟೊಂದು ಸಾಲ ಮಾಡಿರಲಿಲ್ಲ. ಹೀಗಾಗಿ ನಾವು ಕರ್ನಾಟಕವನ್ನು ಆರ್ಥಿಕ ದಿವಾಳಿಗೆ ಸಿಲುಕಿಸದೆ ನಾವು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದರು.
[vc_row][vc_column]
BREAKING NEWS
- ‘ಕಟೀಲ್, ಬೊಮ್ಮಾಯಿ ಅವರೇ ನಿಮ್ಮ ಮನೆಗೂ ಕರೆಂಟ್ ಫ್ರೀ’ ಎಂದ ಕಾಂಗ್ರೆಸ್!
- 2022-23ನೇ ಸಾಲಿನಲ್ಲಿ ಪದವಿ ಪಡೆದ ನಿರುದ್ಯೋಗಿ ಯುವಕ- ಯುವತಿಯರಿಗೆ ‘ಯುವನಿಧಿ’ ಭಾಗ್ಯ ಜಾರಿ ಮಾಡಿದ ಸಿದ್ದು ಸರ್ಕಾರ
- ಮಂಗಳೂರು: ನಗರಾಭಿವೃದ್ದಿ ಪ್ರಾಧಿಕಾರದ ಸಿಬ್ಬಂದಿ ಆತ್ಮಹತ್ಯೆ
- ಗೃಹಲಕ್ಷ್ಮಿ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ? ಬೇಕಾದ ದಾಖಲೆಗಳೇನು? ಕೊನೆ ದಿನಾಂಕದ ಮಾಹಿತಿ
- ಉಚಿತ ಬಸ್ ಯೋಜನೆ – ಜೂನ್ 11 ರಿಂದ ಉಚಿತ ಬಸ್ ಪ್ರಯಾಣ
- ಗ್ಯಾರೆಂಟ್ ಜಾರಿ: ಜು.1ರಿಂದ 200 ಯುನಿಟ್ ಉಚಿತ ವಿದ್ಯುತ್, ಎಪಿಎಲ್ ಗೂ ಗೃಹಲಕ್ಷ್ಮಿ
- ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಪ್ರಕರಣ: ಅಪರಾಧಿ ಆದಿತ್ಯ ರಾವ್ ನಿಂದ ಜೈಲಿನಲ್ಲಿ ದಾಂಧಲೆ..!
- ಈ ಆರ್ಥಿಕ ವರ್ಷದಲ್ಲಿ ಎಲ್ಲಾ ಐದೂ ಗ್ಯಾರಂಟಿ ಜಾರಿ: ಷರತ್ತು ಅನ್ವಯ- ಸಿಎಂ
- ಕಡಬ: ಮನೆ ಮೇಲ್ಛಾವಣಿಯಿಂದ ಬಿದ್ದು ಕಾರ್ಮಿಕ ಮೃತ್ಯು
- ಡಿಕೆಶಿ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಸಿಬಿಐ ತನಿಖೆ ತಡೆಯಾಜ್ಞೆ ವಿಸ್ತರಣೆ