ಬೆಂಗಳೂರು : 5 ಮತ್ತು 8 ನೇ ತರಗತಿ ಮಕ್ಕಳಿಗೆ ನಡೆಸಿರುವ ಮೌಲ್ಯಾಂಕನ ಪರೀಕ್ಷೆಗೆ ಗ್ರೇಡ್ ನಿಗಿದ ಮಾಡಿದ್ದು, ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವಂತಿಲ್ಲ ಎಂಬ ಸೂಚಯನ್ನು ಶಾಲಾ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮ ಹೇಳಿದೆ.
ಮೌಲ್ಯಾಂಕನ ಪರೀಕ್ಷೆಗಳನ್ನು 40 ಅಂಕಗಳ ಲಿಖಿತ ಮೌಲ್ಯಂಕನ ಮತ್ತು ಶಾಲಾ ಹಂತದಲ್ಲಿ 10 ಅಂಕಗಳ ಮೌಖಿಕ ಮೌಲ್ಯಾಂಕನದಲ್ಲಿ ನಡೆಸಲಾಗಿದೆ. ಒಟ್ಟಾರೆ 50 ಅಂಕಗಳಲ್ಲಿ ವಿದ್ಯಾರ್ಥಿ ಗಳಿಸಿ ಅಂಕಗಳನ್ನು 20 ಅಂಕಗಳಿಗೆ ಪರಿವರ್ತಿಸಿ ಗ್ರೇಡ್ ನೀಡಲಾಗುತ್ತದೆ.
ಮಾರ್ಚ್ 27 ರಿಂದ ಏಪ್ರಿಲ್ 1 ರವರೆಗೆ ಶಾಲಾ ಹಂತದಲ್ಲಿ ಮೌಲ್ಯಂಕನ ನಡೆಸಲಾಗಿದ್ದು, ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವಂತಿಲ್ಲ ಎಂಬ ಸೂಚನೆ ನೀಡಲಾಗಿದೆ. ಫಲಿತಾಂಶವನ್ನು ಸಂಬಂಧಿಸಿದ ವಿದ್ಯಾರ್ಥಿ ಹಾಗೂ ಪಾಲಕರಿಗೆ ಮಾತ್ರ ತಿಳಿಸಲಾಗುತ್ತಿದೆ.