ಹೊಸಪೇಟೆ : ಹೊಸಪೇಟೆ ತಾಲ್ಲೂಕಿನ ಕಮಲಾಪುರ ಹೋಬಳಿಯ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ಖಾಲಿರುವ ಗ್ರಾಮ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ತಹಶೀಲ್ದಾರ್ ವಿಶ್ವಜೀತ್ ಮೇಹ್ತಾ ಅವರು ತಿಳಿಸಿದ್ದಾರೆ.
ಅರ್ಜಿಯೊಂದಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ತಹಶೀಲ್ದಾರರ ಕಾರ್ಯಾಲಯಕ್ಕೆ ಸೆ.4ರೊಳಗೆ ಸಲ್ಲಿಸಬಹುದು, ಡಿಡಿಯನ್ನು ತಹಶೀಲ್ದಾರರು, ಹೊಸಪೇಟೆ ಇವರ ಹೆಸರಿಗೆ ಪಡೆಯತಕ್ಕದ್ದು.
ಪ್ರವರ್ಗ 2ಎ, ಪ್ರವರ್ಗ 2ಬಿ, ಪ್ರವರ್ಗ 3ಎ, ಪ್ರವರ್ಗ 3ಬಿ ಮತ್ತು ಸಾಮಾನ್ಯ ವರ್ಗದವರು 200ರೂ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ದವರು 100ರೂ ಅರ್ಜಿ ಶುಲ್ಕವನ್ನು ತಾಲ್ಲೂಕು ಕಚೇರಿಗೆ ಪಾವತಿಸಬೇಕು.
ಅಭ್ಯರ್ಥಿಗಳು ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು ಹಾಗೂ ಸರ್ಕಾರದ ಅನುದಾನಿತ ಶಾಲೆಗಳಿಂದ ಅಥವಾ ಖಾಸಗಿ ಶಾಲೆಗಳಿಂದ ಪಡೆದ ದಾಖಲೆ ಒದಗಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಕಚೇರಿಗೆ ಭೇಟಿ ನೀಡಬಹುದು.