ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ 7ನೇ ವೇತನ ಆಯೋಗ ವರದಿ ಸಲ್ಲಿಸುವ ಅವಧಿಯನ್ನು 6 ತಿಂಗಳು ವಿಸ್ತರಣೆ ಮಾಡಲಾಗಿದೆ.
ರಾಜ್ಯಪಾಲರ ಅದೇಶದಂತೆ ಸಮಯಾವಕಾಶವನ್ನು 19-05-2023 ರಿಂದ 6 ತಿಂಗಳವರೆಗೆ ವಿಸ್ತರಿಸಿರುವುದಾಗಿ ಸರ್ಕಾರದ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. 2022ರ ನವೆಂಬರ್ 19ರಂದು ಆಯೋಗ ರಚನೆಯಾಗಿತ್ತು. ವರದಿ ಸಲ್ಲಿಸಲು ಆರು ತಿಂಗಳ ಸಮಯ ಒದಗಿಸಲಾಗಿತ್ತು.