ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ರಾಜ್ಯದ ಬಗ್ಗೆ ಮಹತ್ವದ ಚರ್ಚೆ ನಡೆಸಿದರು. 76ನೇ ವಸಂತಕ್ಕೆ ಕಾಲಿಟ್ಟಿರುವ ಸಿಎಂ ಸಿದ್ದರಾಮಯ್ಯ ತಮ್ಮ ಹುಟ್ಟುಹಬ್ಬದ ದಿನವೇ ಪ್ರಧಾನಿಯನ್ನು ಭೇಟಿಯಾಗಿರುವುದು ವಿಶೇಷವಾಗಿತ್ತು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಮೋದಿಯನ್ನು ಸಿಎಂ ಭೇಟಿಯಾಗಿದ್ದಾರೆ. ದೆಹಲಿಯ ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ. ಈ ವೇಳೆ ಪ್ರಧಾನಿಗೆ ಮೈಸೂರ್ ಪೇಟ, ಶಾಲು ಹಾಗೂ ಮೈಸೂರು ದಸರಾ ಅಂಬಾರಿಯ ಸ್ಮರಣಿಕೆ ನೀಡಿ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿ ಜತೆ ರಾಜ್ಯದ ಅಭಿವೃದ್ಧಿ, ಹಿತಾಸಕ್ತಿ ಬಗ್ಗೆ ಸುಮಾರು 5 ನಿಮಿಷ ಚರ್ಚೆ ನಡೆಸಿದರು. ಈ ವೇಳೆ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಹಾರ್ದಿಕ ಶುಭಾಶಯಗಳನ್ನು ಪ್ರಧಾನಿ ಮೋದಿ ಕೋರಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಅನುದಾನ ವಿಚಾರವಾಗಿ ಪಿಎಂ ಮೋದಿ ಜತೆ ಚರ್ಚೆ ನಡೆಸಿರುವ ಸಿಎಂ ಕರ್ನಾಟಕದ ಸ್ಥಿತಿಗತಿಗಳ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ. ಬಳಿಕ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರಾಜನಾಥ ಸಿಂಗ್, ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸಲು ಅನುಮತಿ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವ ರಾಜನಾಥ ಸಿಂಗ್ ಅವರಲ್ಲಿ ಮನವಿ ಮಾಡಿದರು.
[vc_row][vc_column]
BREAKING NEWS
- ಉದ್ಯೋಗಿಯಿಂದ ಮಹಾನ್ ಎಡವಟ್ಟು – ಮೈಕ್ರೋಸಾಫ್ಟ್ ನ 32ಟಿಬಿ ಮಾಹಿತಿ ಸೋರಿಕೆ
- ವಂಚನೆ ಪ್ರಕರಣ – ಚೈತ್ರಾ ಸೇರಿ 7 ಮಂದಿಗೆ ಅ. 6ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ
- ನಿಂಜಾ ಪ್ರಶಸ್ತಿ ಪಡೆದ 71 ವರ್ಷದ ಮಹಿಳೆಯ ಗಿನ್ನಿಸ್ ದಾಖಲೆ!
- ಹೊಸ ಐಫೋನ್ ಖರೀದಿಗೆ ಮುಗಿಬಿದ್ದ ಜನ – ಈ ಫೋನ್ ನಲ್ಲಿ ಅಂಥಾದ್ದೇನಿದೆ?
- ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಕುರಿತ ಸ್ಪೋಟಕ ಮಾಹಿತಿ ಬಹಿರಂಗ?
- ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಚಿಕ್ಕಮಗುವನ್ನು ಬೇಟೆಯಾಡುತ್ತಿದ್ದಾರೆ -ಕಮಲ್ ಹಾಸನ್
- ಮುಂಬೈ ಜಿಎಸ್ ಬಿ ಗಣೇಶೋತ್ಸವದಲ್ಲಿ ಪಾಲ್ಗೊಂಡ ಕರಾವಳಿ ಬೆಡಗಿ ನಟಿ ಪೂಜಾ ಹೆಗ್ಡೆ
- ಎತ್ತಿನಹೊಳೆ ಯೋಜನೆ Out dated subject – ಮಾಜಿ ಸಿಎಂ ವೀರಪ್ಪ ಮೊಯಿಲಿ..!
- ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಂಬಳ – ಅಶೋಕ್ ರೈ ನೇತೃತ್ವದಲ್ಲಿ ಸ್ಥಳ ಪರಿಶೀಲನೆ
- ಮುದ್ರಾಂಕ ಇಲಾಖೆಯ ವೆಬ್ಸೈಟ್ಗೆ ಕನ್ನ – ಎಇಪಿಎಸ್ ಮೂಲಕ ಒಂದು ಲಕ್ಷ ರೂ. ವಂಚನೆ?