ಮಧ್ಯಪ್ರದೇಶ: ಸಿಯೋನಿ ಜಿಲ್ಲೆಯ ಕನ್ಹಿವಾಡದ ಮುಂಡ್ರೈ ಗ್ರಾಮದ 55 ವರ್ಷದ ಮಹಿಳೆಯನ್ನು ನಾಯಿಗಳು ಕೊಂದು ತಿಂದಿವೆ.
ಜಮೀನಿಗೆ ತೆರಳುತ್ತಿದ್ದ ಮಹಿಳೆ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು, ಸ್ಥಳದಲ್ಲೇ ಆಕೆ ಸಾವನ್ನಪ್ಪಿದ್ದಾಳೆ. ನಂತರ ಆಕೆಯ ಶವವನ್ನು ತಿಂದಿವೆ.
ಇದನ್ನು ನೋಡಿದ ಕೆಲವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶವದ ಉಳಿದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.