ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ ಗ್ರಾಮದ ಶ್ರೀರಂಗನಾಥ ಸ್ವಾಮಿ ಬ್ರಹ್ಮರಥೋತ್ಸವವು ಇದೇ ಏಪ್ರಿಲ್ 7 ರಂದು ಮಧ್ಯಾಹ್ನ 12 ರಿಂದ 1.30 ವರೆಗೆ ಬ್ರಹ್ಮರಥೋತ್ಸವ ಹಾಗೂ ಧೂಳೋತ್ಸವ ಮತ್ತು ದೃಷ್ಠಿ ಕಾರ್ಯ ಜರುಗಲಿದೆ.
ಶ್ರೀ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈಗಾಗಲೇ ಮಾರ್ಚ್ 24 ರಿಂದ ಪ್ರಾರಂಭವಾಗಿದ್ದು, ಏಪ್ರಿಲ್ 10 ರವರೆಗೆ ನಡೆಯಲಿವೆ.
ಇದೇ ಏಪ್ರಿಲ್ 6ರಂದು ಗಜೇಂದ್ರ ಮೋಕ್ಷ, ಸಾಯಂಕಾಲ ಶೇಷ ವಾಹನ ಉತ್ಸವ, ಏಪ್ರಿಲ್ 8 ರಂದು ಜಲ ಕ್ರೀಡೋತ್ಸವ, ಮೃಗ ಯಾತ್ರೋತ್ಸವ, ಏಪ್ರಿಲ್ 9 ರಂದು ವಸಂತೋತ್ಸವ, ಧ್ವಜಾ ಅವರೋಹಣ, ಕಂಕಣ ವಿಸರ್ಜನೆ, ಪೂರ್ಣಹುತಿ, 101 ಮಂಗಳಾರತಿ, ರಾತ್ರಿ ಶಯನೋತ್ಸವ ನಡೆಯಲಿದೆ. ಏಪ್ರಿಲ್ 10ರಂದು ಸಂಜೆ 6 ಗಂಟೆಗೆ ಅಬ್ಬಿನಹೊಳೆ ಶ್ರೀ ಕಣಿವೆ ಮಾರಮ್ಮ ದೇವಿಗೆ ಸುಮಂಗಲೆಯರಿಂದ ಅಕ್ಕಿ ತಂಬಿಟ್ಟಿನ ಆರತಿ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಸಮಿತಿ ಮತ್ತು ಅಬ್ಬಿನಹೊಳೆ ಹಾಗೂ ಕಂಬತ್ತನಹಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ.
(ಸಾಂದರ್ಭಿಕ ಚಿತ್ರ)