ದೆಹಲಿ: ಈಚೆಗಷ್ಟೆ ನಡೆದ ʻಮೆಟ್ ಗಾಲಾ 2023ʼ ಫ್ಯಾಷನ್ ಕಾರ್ಯಕ್ರಮದಲ್ಲಿ ನಟಿ ಪ್ರಿಯಾಂಕ ಚೋಪ್ರಾ, ಬಿಳಿ ಬಣ್ಣದ, ತಿಳಿ ನೀಲಿ ಅಂಚಿನ ವಜ್ರದ ನೆಕ್ಲೆಸ್ ಧರಿಸಿದ್ದರು. ಇದೀಗ, ಇದರ ಬೆಲೆ ಕೇಳಿದರೆ ಹೌಹಾರುವಂತಾಗಿದೆ.
ಪ್ರಿಯಾಂಕಾ ಧರಿಸಿದ್ದ ನೆಕ್ಲೆಸ್ ಬೆಲೆ ಬರೋಬ್ಬರಿ 204 ಕೋಟಿ ರೂ. ಇದು ಇಷ್ಟೊಂದು ದುಬಾರಿಯಾಗಲು ಕಾರಣ, ನೆಕ್ಲೆಸ್ ತುದಿಯಲ್ಲಿನ ತಿಳಿ ನೀಲಿ ಬಣ್ಣದ ವಜ್ರದ ತುಣುಕು. ಅಪರೂಪದಲ್ಲಿ ಅಪರೂಪವಾದ ಇದು, ವಿಶ್ವದಲ್ಲಿಯೇ ಅತಿ ಹೆಚ್ಚು ಬೆಲೆಗೆ ಹರಾಜಾದ ವಜ್ರದ ತುಣುಕುಗಳಲ್ಲಿ ಒಂದು. ಹಾಗಾಗಿ ಇದರ ಬೆಲೆ ಅಷ್ಟೊಂದು ರೇಟು.!