ಚಿತ್ರದುರ್ಗ: ಚಿತ್ರದುರ್ಗ ನಗರದ ಎ.ಪಿ.ಎಂ.ಸಿ ಆವರಣದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಇದೇ ಮೇ.31 ಮತ್ತು ಜೂನ್ 1 ರಂದು ಕೃಷಿ ಕೋಟಾದಡಿ ರಾಜ್ಯದ ಕೃಷಿ ಹಾಗೂ ಸಂಬಂಧಿತ ವಿಶ್ವ ವಿದ್ಯಾನಿಲಯಗಳಿಗೆ 2023-24ನೇ ಸಾಲಿನ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಕೃಷಿ ಪ್ರಾಯೋಗಿಕ ತರಬೇತಿ ಹಮ್ಮಿಕೊಳ್ಳಲಾಗಿದೆ.
ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ, ರೇಷ್ಮೆ, ಹಣ್ಣು, ತರಕಾರಿ, ಬಿತ್ತನೆ ಬೀಜ, ಆಹಾರ ಧಾನ್ಯ, ಕೃಷಿ ಪರಿಕರಗಳ ಬಗ್ಗೆ ಪರಿಚಯಿಸಲಾಗುತ್ತದೆ.
ಕರ್ನಾಟಕ ರಾಜ್ಯದ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವ ವಿದ್ಯಾನಿಲಯಗಳಲ್ಲಿ ಸ್ನಾತಕ ಪದವಿಗಳ ಪ್ರವೇಶಕ್ಕೆ ಪ್ರವೇಶ ಬಯಸುವ ಅಭ್ಯರ್ಥಿಗಳು ಇದೇ ಮೇ.25 ರೊಳಗೆ ಸಂಸ್ಥೆ ಕಛೇರಿಯಲ್ಲಾಗಲಿ ಅಥವಾ 9742455666 ಗೆ ಫೋನ್ ಪೇ ಮೂಲಕವಾಗಲಿ ರೂ. 700/- ಅನ್ನು ಪಾವತಿಸಿ ಹೆಸರು ನೊಂದಾಯಿಸಿ ಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08194-228292, 9742455666, 9448656231 ಗೆ ಸಂಪರ್ಕಿಸಬೇಕು ಎಂದು ಕೃಷಿ ತಂತ್ರಜ್ಞರ ಸಂಸ್ಥೆ ಕಾರ್ಯದರ್ಶಿ ತಿಳಿಸಿದ್ದಾರೆ.