ಬೆಂಗಳೂರು: ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ಸ್ಪರ್ದಿಸಲಾಗದ ವ್ಯಕ್ತಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ. ತಾಕತ್ತಿದ್ದರೆ ಚುನಾವಣೆಗೆ ಸ್ಪರ್ದಿಸಿ ಜನಬೆಂಬಲ ಪಡೆದು ಬರಲಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್, ಬಿಎಲ್ ಸಂತೋಷ್ ಗೆ ಸವಾಲ್ ಹಾಕಿದೆ.
ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟು ಬಿಜೆಪಿಯಲ್ಲಿನ ಲಿಂಗಾಯತ ಹಾಗೂ ಹಿಂದುಳಿದ ನಾಯಕತ್ವವನ್ನು ಮುಗಿಸಿದ ಬಿಎಲ್ ಸಂತೋಷ್ ಎಂಬ ವ್ಯಕ್ತಿಗೆ ಚುನಾವಣೆ ಎದುರಿಸಲು ಭಯವೇಕೆ? ಈ ಕುರಿತು ಸರಣಿ ಟ್ವಿಟ್ ಮಾಡಿದೆ.