ಉತ್ತರ ಪ್ರದೇಶ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಹಜರತ್ ಮೌಲಾನಾ ರಬೆ ಹಸನಿ ನದ್ವಿ ನಿಧನರಾಗಿದ್ದಾರೆ.
ಮೌಲಾನಾ ರಬೆ ಹಸನಿ ನದ್ವಿ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನದ್ವಿ ಅವರನ್ನು ಚಿಕಿತ್ಸೆಗಾಗಿ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಲಖನೌಗೆ ಕರೆತರಲಾಗಿತ್ತು. ಡಾಲಿಗಂಜ್‌ನ ನಡ್ವಾ ಮದರಸಾದಲ್ಲಿ ಅವರು ಕೊನೆಯುಸಿರೆಳೆದರು.