Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಅಂಬೇಡ್ಕರ್ ಸರ್ವಜನರ ಹಿತಚಿಂತಕ: ಮಾಜಿ ಸಚಿವ ಎಚ್.ಆಂಜನೇಯ

0

 

ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್‌ರವರು ಸರ್ವ ಸಮುದಾಯಗಳಿಗೆ ಹಕ್ಕುಗಳನ್ನು ಕಲ್ಪಿಸಿಕೊಟ್ಟ ಮಹನ್ ನಾಯಕಎಂದು ಮಾಜಿ ಸಚಿವಎಚ್.ಆಂಜನೇಯ ಹೇಳಿದರು.

ಚಿತ್ರದುರ್ಗತಾಲೂಕು ಸೀಬಾರ ಸಮೀಪ ಶುಕ್ರವಾರ ಆಯೋಜಿಸಿದ್ದ ಅಂಬೇಡ್ಕರ್‌ಜಯತಿ ಸರಳ ಆಚರಣೆಯಲ್ಲಿ ಸಂವಿಧಾನ ಶಿಲ್ಪಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್‌ರವರುರಚಿಸಿದ ವಿಶ್ವದ ಬಹುದೊಡ್ಡ ಲಿಖಿತ ಸಂವಿಧಾನ ಬಸವಣ್ಣನ ಆಶಯಗಳನ್ನೇ ಹೊಂದಿದೆ.ಭಾರತ ಸ್ವತಂತ್ರ ಗಳಿಸಿದ ನಂತರ ಪಂಡಿತ್ ನೆಹರು ಪ್ರಥಮ ಪ್ರಧಾನಿಯಾಗಿಅಧಿಕಾರ ಸ್ವೀಕರಿಸುತ್ತಿದ್ದಂತೆ ಸಂವಿಧಾನರಚನೆಗೆಅAಬೇಡ್ಕರ್ ನೇತೃತ್ವದಲ್ಲಿ ಸಮಿತಿ ರಚಿಸಿದರು. ಅನೇಕ ವರ್ಷಗಳ ಅಧ್ಯಯನದ ಬಳಿಕ ದೇಶಕ್ಕೆ ಭದ್ರ ಬುನಾದಿ ಹಾಕುವ ರೀತಿ ಭೀಮ್‌ರಾವ್‌ಅವರು ಸಂವಿಧಾನ ರಚಿಸಿ, ಜಗತ್ತಿನ ಗಮನಸೆಳೆದರು ಎಂದರು.

ಅಸಾಧಾರಣಜ್ಞಾನದ ವ್ಯಕ್ತಿ.ಬಹುಮುಖಿ ವ್ಯಕ್ತಿತ್ವ.ಶ್ರೇಷ್ಠ ಆರ್ಥಿಕತಜ್ಞ, ಸಾಮಾಜಿಕ ಪರಿವರ್ತನೆ ಹಾಗೂ ಸಮಾನತೆಯ ಹರಿಕಾರಎಂದೇಜಗತ್ತಿನಲ್ಲಿ ಗುರುತಿಸಿಕೊಂಡಿರುವ ಅಂಬೇಡ್ಕರ್, ಎಲ್ಲ ವರ್ಗದ ಹಿತಕ್ಕಾಗಿಅದರಲ್ಲೂ ಮಹಿಳೆಯರು, ಬಡವರು ಹಾಗೂ ಹಳ್ಳಿಗಳ ಜನರಿಗೆಉತ್ತಮ ಬದುಕುಕಟ್ಟಿಕೊಡಬೇಕೆಂದು ಪ್ರತಿಪಾದಿಸಿದ ಮಹಾನ್ ನಾಯಕ.ಇಂತಹ ನಾಯಕನಜನ್ಮದಿನವನ್ನು ನಾವೆಲ್ಲರೂಆಚರಿಸಬೇಕೆಂದುಬಣ್ಣಿಸಿದರು.

ದೇಶದಜನರಿಗೆ ಬೆಳಕಿನ ಕಡೆಗೆದಾರಿ ತೋರಿಸಿದ ಭೀಮ್‌ರಾವ್, ಹೆಣ್ಣುಮಕ್ಕಳಿಗೆ ಶಿಕ್ಷಣ, ಮತದಾನದ ಹಕ್ಕು, ಆಸ್ತಿ ಹಕ್ಕು ನೀಡಿದರು. ಹಳ್ಳಿ ಹಾಗೂ ಬಡಜನರ ಪ್ರಗತಿಗಾಗಿಜೀವನವನ್ನೇ ಮುಡಿಪಾಗಿಟ್ಟ ಮಹಾ ಮಾನವತಾವಾದಿ ಎಂದರು.

ದೇಶದಲ್ಲಿಎಲ್ಲ ವರ್ಗದವರ ಸಮಾನತೆಯ ಬದುಕಿನ ಹಿಂದೆಅಂಬೇಡ್ಕರ್‌ಕೊಡುಗೆಇದೆ.ಸAವಿಧಾನದ ಮೂಲಕ ಕತ್ತಲೆಯಜಗತ್ತಿಗೆ ಬೆಳಕು ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ.ಅವರನ್ನು ಸ್ಮರಿಸುವುದು ಭಾರತದ ಪ್ರತಿ ಪ್ರಜೆಯ ಹೊಣೆಯಾಗಿದೆಎಂದು ತಿಳಿಸಿದರು.

ನಿರಂತರಓದು, ಛಲದಿಂದ ಸಾಮಾನ್ಯಜನರುಕೂಡ ಶಾಂತಿ ಮಾರ್ಗದಲ್ಲಿದೇಶಕ್ಕೆ ಬಹುದೊಡ್ಡಕೊಡುಗೆ ನೀಡಬಹುದುಎಂಬುದಕ್ಕೆ ಬಸವಣ್ಣ, ಅಂಬೇಡ್ಕರ್ ಸೇರಿ ಅನೇಕ ಮಹನೀಯರಇತಿಹಾಸದಿಂದ ತಿಳಿಯಬಹುದು.ಆದ್ದರಿಂದ ಪ್ರತಿಯೊಬ್ಬ ಪೋಷಕರು, ಬಡತನ ನೆಪ ಮಾಡದೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು. ಶಿಕ್ಷಣದಿಂದ ಮಾತ್ರಕುಟುಂಬ, ಸಮಾಜ, ದೇಶದ ಸಮಗ್ರ ಬದಲಾವಣೆ ಸಾಧ್ಯ ಎಂಬ ವಾಸ್ತವತೆ ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇದೇಕಾರಣಕ್ಕೆರಾಜ್ಯದಲ್ಲಿ ಅನೇಕ ಮಠ-ಮಾನ್ಯಗಳು ಲಕ್ಷಾಂತರ ಮಕ್ಕಳಿಗೆ ಅಕ್ಷರ, ಅನ್ನದಾಸೋಹ ನೀಡುವಲ್ಲಿ ಶ್ರಮಿಸುತ್ತೇವೆ. ಈ ಮೂಲಕ ಸಮಾಜದಲ್ಲಿ ಸಮಗ್ರ ಪರಿವರ್ತನೆಸಾಧ್ಯ ಎಂಬ ಸತ್ಯವನ್ನು ಮೊದಲುಜಗತ್ತಿಗೆ ಸಾರಿದ್ದುಕನ್ನಡ ನಾಡಿನ ಮಠಗಳು ಎಂಬುದು ನಮ್ಮ ಹೆಮ್ಮೆಎಂದು ಹೇಳಿದರು.

ಅಂಬೇಡ್ಕರ್ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತಿತರ ಕ್ಷೇತ್ರಗಳಲ್ಲೂ ಸಾಧನೆಗೈದ ಭಾರತದ ಹೆಮ್ಮೆಯ ಪುತ್ರ.

ಸವಾಲುಗಳನ್ನು ಮೆಟ್ಟಿ ಸಮಾಜಕ್ಕೆಕೊಡುಗೆ ನೀಡಬಹುದುಎಂಬುದಕ್ಕೆ ಬಸವಣ್ಣ, ಕನಕದಾಸ, ವಾಲ್ಮಿಕಿ, ಶ್ರೀಕೃಷ್ಣ, ಅಂಬೇಡ್ಕರ್ ಹೀಗೆ ಅನೇಕ ಮಹನೀಯರಇತಿಹಾಸವನ್ನು ಸ್ಫೂರ್ತಿಯನ್ನಾಗಿಸಿ, ಪ್ರತಿ ವ್ಯಕ್ತಿಜೀವನದಲ್ಲಿ ಸಾಧನೆ ಮಾಡಬೇಕುಎಂದು ಹೇಳಿದರು.

ಈ ಸಂದರ್ಭದಲ್ಲಿ ವೀರಶೈವ ಸಮುದಾಯಇರಿಯ ಮುಖಂಡ ಹೊಳಲ್ಕೆರೆ ಪಿಎಲ್‌ಡಿ ಬ್ಯಾಂಕ್ ಮಾಜಿಅಧ್ಯಕ್ಷರಾದಕಾಟೀಹಳ್ಳಿ ಶಿವಣ್ಣ, ಎಂ.ಕೆ.ರುದ್ರಣ್ಣ,ಬೋವಿ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕಗೋಡೆಮನೆ ಹನುಮಂತಪ್ಪ,  ಮಾಜಿ ನಗರಸಭೆ ಸದಸ್ಯ ಸಿ.ಎನ್.ಕುಮಾರ್, ಮುಖಂಡರಾದಗಾದ್ರೇಶ್, ನಾಗರಾಜ್, ಸಂತೋಷ ಉಪಸ್ಥಿತರಿದ್ದರು.

Leave A Reply

Your email address will not be published.