Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಇಂದು ಅಮಿತ್ ಶಾ ಅವರ ರೋಡ್ ಶೋ .! ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗ ಹೀಗಿದೆ.!

0

 

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು(ಮಂಗಳವಾರ) ನಗರದ ಆಡುಗೋಡಿ ಸಿಗ್ನಲ್‌ನಿಂದ ಹೊಸೂರು ರಸ್ತೆಯ ಟೋಟಲ್ ಮಾಲ್‌ವರೆಗೂ ರೋಡ್‌ ಶೋ ನಡೆಸಲಿದ್ದಾರೆ. ರೋಡ್‌ ಶೋ ನಡೆಯುವ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಪೊಲೀಸರು ಸೂಚಿಸಿದ್ದಾರೆ. ಮರಿಗೌಡ ರಸ್ತೆಯಿಂದ ಮಡಿವಾಳ ಕಡೆ ಬರುವ ವಾಹನಗಳು ಡೇರಿ ಸರ್ಕಲ್ ಮೂಲಕ ಬನ್ನೇರುಘಟ್ಟ ರಸ್ತೆ ಮೂಲಕ ಸಂಚರಿಸಬೇಕು. ಎಲೆಕ್ಟ್ರಾನಿಕ್ ಸಿಟಿ ಕಡೆಯಿಂದ ಬರುವ ವಾಹನಗಳು ವೀರಸಂದ್ರ ಬಳಿ ನೈಸ್ ರಸ್ತೆ ಮೂಲಕ ಬನ್ನೇರುಘಟ್ಟ ರಸ್ತೆ ಮೂಲಕ ಸಂಚಾರ ಮಾಡಬೇಕು ಎಂದು ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರೆ.

ಪರ್ಯಾಯ ಮಾರ್ಗಗಳ ವಿವರ

ಹೊಸೂರು ಲಷ್ಕರ್ ರಸ್ತೆಯಿಂದ ಬರುವ ವಾಹನಗಳು ಅನೆಪಾಳ್ಯ ಜಂಕ್ಷನ್ ಮೂಲಕ ಬನ್ನೇರುಘಟ್ಟ ರಸ್ತೆ ಪ್ರವೇಶಿಸಬೇಕು.

ಮಾರತ್ತಹಳ್ಳಿ ಕಡೆಯಿಂದ ಬರುವ ವಾಹನಗಳು ಹೆಚ್ಎಸ್ಆರ್ ಲೇಔಟ್ 14 ನೇ ಮೈನ್ ಮೂಲಕ ಹೊಸೂರು ರಸ್ತೆ ಪ್ರವೇಶಿಸಬೇಕು.

ಬಿಟಿಎಂ ಲೇಔಟ್ ಕಡೆಯಿಂದ ಬರುವ ವಾಹನಗಳು ಜಯದೇವ ಜಂಕ್ಷನ್ ಮೂಲಕ ಬನ್ನೇರುಘಟ್ಟ ರಸ್ತೆ ಪ್ರವೇಶಿಸಬಹುದು.

ಬೇಗೂರು, ದೇವರ ಚಿಕ್ಕನಹಳ್ಳಿಯಿಂದ ಬರುವ ವಾಹನಗಳು ಬೊಮ್ಮನಹಳ್ಳಿ ಜಂಕ್ಷನ್ ಮೂಲಕ ಹೆಚ್ಎಸ್ಆರ್ ಲೇಔಟ್ ತಲುಪುವುದು.

ಇನ್ನೂ ಕೆಲವು ರಸ್ತೆಗಳ ಬದಲಿಗೆ ಪರ್ಯಾಯ ಮಾರ್ಗ ಬಳಸಲು ಸೂಚನೆ

ಕಬ್ಬನ್ ರಸ್ತೆ, ಟ್ರಿನಿಟಿ ವೃತ್ತ, ಬೈಯ್ಯಪ್ಪನಹಳ್ಳಿ, ಬೆನ್ನಿಗಾನಹಳ್ಳಿ, ಟಿನ್ ಫ್ಯಾಕ್ಟರಿ, ಹೆಚ್ಎಎಲ್, ಹಳೇ ಮದ್ರಾಸ್ ರಸ್ತೆ ಬದಲಿಗೆ ಪರ್ಯಾಯ ರಸ್ತೆ ಬಳಸಲು ನಗರ ಸಂಚಾರ ಪೊಲೀಸರು ವಾಹನ ಸವಾರರಿಗೆ ಸೂಚನೆ ಸೂಚನೆ ನೀಡಿದ್ದಾರೆ.

 

Leave A Reply

Your email address will not be published.