ತಿರುಪತಿ: ಏನು.? ತಿರುಮಲ ತಿರುಪತಿ ದೇವಸ್ಥಾನ ಹೆಸರಿನ ಮತ್ತೊಂದು ನಕಲಿ ವೆಬ್‌ಸೈಟ್’ನ್ನ ಟಿಟಿಡಿಯ ಐಟಿ ಇಲಾಖೆ ಗುರುತಿಸಿದೆ.
ಸಧ್ಯ ಟಿಟಿಡಿ ಅಧಿಕಾರಿಗಳು ತಿರುಮಲ ಒನ್ ಟೌನ್ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ 19,2023 ಯು/ಎಸ್ 420, 468, 471 ಐಪಿಸಿ ಪೊಲೀಸರು ದಾಖಲಿಸಿ, ಎಪಿ ಫೊರೆನ್ಸಿಕ್ ಸೈಬರ್ ಸೆಲ್‌ಗೆ ಹಸ್ತಾಂತರಿಸಿದ್ದಾರೆ. ನಕಲಿ ವೆಬ್‌ಸೈಟ್ ಕುರಿತು ಸೈಬರ್ ಸೆಲ್ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಟಿಟಿಡಿ ಹೆಸರಿನಲ್ಲಿ ಈಗಾಗಲೇ 40 ನಕಲಿ ವೆಬ್‌ಸೈಟ್‌ಗಳನ್ನ ಗುರುತಿಸಲಾಗಿದೆ. ಇನ್ನು ಅವುಗಳ ವಿರುದ್ಧ ಪ್ರಕರಣಗಳನ್ನ ದಾಖಲಿಸಲಾಗಿದೆ.
ಟಿಟಿಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನ ಮಾಡಿ ಈ ನಕಲಿ ವೆಬ್‌ಸೈಟ್’ಗಳನ್ನ ರಚಿಸಲಾಗುತ್ತಿದೆ ಎಂದು ಟಿಟಿಡಿಯ ಅಧಿಕಾರಿಗಳು ತಿಳಿಸಿದ್ದಾರೆ. https://tirupatibalaji.ap.gov.in/ ಹೆಸರಿನ ಅಧಿಕೃತ ವೆಬ್‌ಸೈಟ್ ಇದ್ದರೂ ಇವುಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನ ಮಾಡಿ ನಕಲಿ ವೆಬ್‌ಸೈಟ್’ಗಳನ್ನ ತಯಾರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಈ ನಿಟ್ಟಿನಲ್ಲಿ ಭಕ್ತರು ಜಾಗೃತರಾಗಬೇಕೆಂದು ಕೋರಲಾಗಿದ್ದು, TTDಯ ಅಧಿಕೃತ ವೆಬ್‌ಸೈಟ್ ಮೂಲಕ ಶ್ರೀವಾರಿಯ ಸೇವೆಗಳು, ದರ್ಶನ ಟಿಕೆಟ್‌ಗಳು ಮತ್ತು ಕೊಠಡಿಗಳನ್ನ ಕಾಯ್ದಿರಿಸಲು ಭಕ್ತರಿಗೆ ಸೂಚಿಸಲಾಗಿದೆ. ಇದಲ್ಲದೇ, ಟಿಟಿಡಿಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ ನ್ನ ಟಿಟಿದೇವಸ್ಥಾನಗಳಿಗೂ ಬಳಸಬಹುದು ಎಂದು ಅವರು ಬಹಿರಂಗಪಡಿಸಿದರು.