ಹೊಳಲ್ಕೆರೆ: ರಾಜ್ಯದಲ್ಲಿ ಸಮಾಜಕಲ್ಯಾಣಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿದ ಖ್ಯಾತಿ ಎಚ್.ಆಂಜನೇಯಅವರಿಗೆ ಇದೆ ಎಂದು ಮಾಜಿ ಶಾಸಕ ಎ.ವಿ.ಉಮಾಪತಿ ಹೇಳಿದರು.
ತಾಲೂಕಿನ ಬಸಾಪುರ, ರಂಗಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗುರುವಾರ ಮತಪ್ರಚಾರ ನಡೆಸಿದ ಸಂದರ್ಭ ಮಾತನಾಡಿ, ಹಿಂದುಳಿದ-ಸಮಾಜಕಲ್ಯಾಣ ಇಲಾಖೆ ಸಚಿವರಾಗಿದ್ದಆಂಜನೇಯ ಆಡಳಿತದ ಅವಧಿ ಹೊಳಲ್ಕೆರೆ ಅಷ್ಟೇ ಅಲ್ಲಚಿತ್ರದುರ್ಗಜಿಲ್ಲೆಗೆ ಸುವರ್ಣಯುಗವಾಗಿತ್ತು. ಅಂತಹ ದಿನಗಳು ಮರುಕಳಿಸಲು ದಿನಗಣನೆಆರಂಭವಾಗಿದೆಎಂದರು.
ಸಮಾಜಕಲ್ಯಾಣಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿದ ಆಂಜನೇಯ ಎಂದಿಗೂ ದ್ವೇಷದರಾಜಕಾರಣ ಮಾಡಲಿಲ್ಲ. ನನಗೆ ಈ ಊರಲ್ಲಿಕಡಿಮೆ ಮತ ಬಂದಿವೆ ಎಂದು ಆ ಗ್ರಾಮದಜನರನ್ನು ನಿರ್ಲಕ್ಷö್ಯ ಮಾಡಲಿಲ್ಲ. ಜಾತ್ಯತೀತ, ಪಕ್ಷಾತೀತವಾಗಿಕ್ಷೇತ್ರದಜನರನ್ನುಗೌರವದಿಂದಕAಡರುಎAದು ಹೇಳಿದರು.
ಭದ್ರಾ ಮೇಲ್ದಂಡೆಯೋಜನೆಗಾಗಿ ಬಹಳಷ್ಟು ಮಂದಿ ಹೋರಾಟ ನಡೆಸಿದ ಫಲ ಯೋಜನೆಜಾರಿಗೊಂಡಿತು.ಆದರೆ, ಹೊಳಲ್ಕೆರೆ ತಾಲೂಕುಕೈಬಿಟ್ಟು ಹೋಗಿತ್ತು.ತಕ್ಷಣ ಅಂದಿನ ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡತಂದು, ಕ್ಷೇತ್ರವನ್ನು ಭದ್ರಾ ಮೇಲ್ದಂಡೆಯೋಜನೆ ವ್ಯಾಪ್ತಿಗೆ ಸೇರಿಸಿದರು. ಜೊತೆಗೆ ಸಾವಿರಾರು ಕೊಳವೆಬಾವಿ ಕೊರೆಯಿಸಿ, ಬರಡುಭೂಮಿಗಳು ತೋಟಗಳಾಗಿ ಮಾರ್ಪಾಡು ಆಗುವ ರೀತಿಕಾರ್ಯನಿರ್ವಹಿಸಿದರು ಎಂದು ತಿಳಿಸಿದರು.
ಇಷ್ಟೇಲ್ಲ ಪ್ರಗತಿ ಕೆಲಸ ಮಾಡಿದಆಂಜನೇಯ ಕಳೆದ ಬಾರಿ ನಾನು ಇಂತಹ ಕೆಲಸ ಮಾಡಿದ್ದೇನೆಎಂದು ಹೇಳಿಕೊಳ್ಳುವಲ್ಲಿ ಮತ್ತು ಪ್ರಚಾರ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದ ಫಲ, ಅಹಂಕಾರಿ ವ್ಯಕ್ತಿಎಂ.ಚಂದ್ರಪ್ಪ ಗೆಲುವು ಸಾಧಿಸಿದರು.ಆದರೆ, ಈಗ ಜನರೇಆಂಜನೇಯಅವರು ಮಾಡಿರುವ ಕೆಲಸ ಸ್ಮರಿಸುತ್ತಿದ್ದಾರೆ.ಯಾವುದೇಊರಿಗೆ ನಾವು ಹೋಗಲಿ ಆಂಜನೇಯಅವರನ್ನುಗೆಲ್ಲಿಸುತ್ತೇವೆ. ಕ್ಷೇತ್ರದಅಭಿವೃದ್ಧಿಗಾಗಿಎಂದುಜನರುಘೋಷಣೆ ಹಾಕುತ್ತಿದ್ದಾರೆ. ಹಳ್ಳಿಗಳಲ್ಲಿ ಆಂಜನೇಯಅವರನ್ನು ಸ್ವಾಗತಿಸಲುಜನರು ಸಾವಿರಾರುರೂಪಾಯಿ ವೆಚ್ಚ ಮಾಡುತ್ತಿದ್ದಾರೆಎಂದರು.
ನಾನು ಆರೇಳು ಚುನಾವಣೆಗಳನ್ನು ನೋಡಿದ್ದೇನೆ. ಆದರೆ, ಈ ಬಾರಿ ಆಂಜನೇಯ ಪರ ಅಲೆ ಇರುವುದನ್ನು ನಾನು ಹಿಂದೆಂದುಕಂಡಿರಲಿಲ್ಲ. ಕಾಂಗ್ರೆಸ್ ಪಕ್ಷ ಬಡವರಉದ್ಧಾರಕ್ಕೆ ಶ್ರಮಿಸುತ್ತದೆ ಎಂಬ ನಂಬಿಕೆ ಜನರಲ್ಲಿದ್ದು, ಈ ಕಾರಣಕ್ಕೆಎಲ್ಲೆಡೆ ನೂರಾರು ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಸೇರ್ಪಡೆಆಗುತ್ತಿದ್ದಾರೆಎಂದು ಹೇಳಿದರು.
ಭೋವಿ ಸಮಾಜದಜಿಲ್ಲಾಧ್ಯಕ್ಷಚಿಕ್ಕಂದವಾಡಿತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಸಮಾಜಕಲ್ಯಾಣ ಇಲಾಖೆಗೆ ಬಲ ತುಂಬಿದವರುಆಂಜನೇಯ.ಜೊತೆಗೆ ಕ್ಷೇತ್ರಕ್ಕೆ ಸಾವಿರಾರು ಕೋಟಿರೂಪಾಯಿ ಅನುದಾನತಂದು ಅಭಿವೃದ್ಧಿ ಕೆಲಸ ಮಾಡಿದರು. ಈ ಬಾರಿಅವರನ್ನು ನಾವುಗಳು ಒತ್ತಾಯದಿಂದಚುನಾವಣೆಕಣಕ್ಕೆ ಇಳಿಸಿದ್ದೇವೆ. ಅವರನ್ನುಕ್ಷೇತ್ರದಇತಿಹಾಸದಲ್ಲಿಯೇದಾಖಲೆ ಮತಗಳ ಅಂತರದಿಂದ ಗೆಲ್ಲಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಜಿಪಂ ಮಾಜಿಉಪಾಧ್ಯಕ್ಷಗಂಗಾಧರ್, ಪಿಎಲ್‌ಡಿ ಬ್ಯಾಂಕ್‌ಅಧ್ಯಕ್ಷ ಕಾಟೀಹಳ್ಳಿ ಶಿವಣ್ಣ, ಕೆಪಿಸಿಸಿ ಸಂಯೋಜಕ ಲೋಕೇಶ್‌ನಾಯ್ಕ್, ಯೂತ್‌ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದಗೋಡೇಮನೆ ಹನುಮಂತಪ್ಪ, ಕೆ.ಸಿ.ಪುರುಷೋತ್ತಮ್, ವದಿಗೆರೆರಾಜಪ್ಪ, ತುಪ್ಪದಹಳ್ಳಿ ಶೇಖರ್, ವೈಶಾಖ್‌ಯಾದವ್ ಉಪಸ್ಥಿತರದ್ದರು.