ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿವಿಧೆಡೆಗಳಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಇವರ ಪೆಟ್ರೋಲಿಯಂ ರಿಟೇಲ್ ಮಳಿಗೆ ಮಾರಾಟಗಾರರಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಮಾಜಿ ಸೈನಿಕರು “ಡಿಫೆನ್ಸ್” ವರ್ಗ (ಕ್ಯಾಟಗರಿ) ದಡಿಯಲ್ಲಿ “www.petrolpumpdealerchayan.in” ಎಂಬ ಜಾಲತಾಣದಲ್ಲಿ 2023ರ ಸೆಪ್ಟೆಂಬರ್ 27 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.